ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರಸಾಳು ಬಳಿ ಹಳಿ ಮೇಲೆ ಬಿದ್ದ ಮರ, ತಾಳಗುಪ್ಪ-ಬೆಂಗಳೂರು ರೈಲು ಮಾರ್ಗಮಧ್ಯೆ ಸ್ಥಗಿತ

ಶಿವಮೊಗ್ಗ: ತಾಳಗುಪ್ಪದಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲು, ಅರಸಾಳು ಬಳಿ ಹಳಿಯ ಮೇಲೆ ಮರ ಬಿದ್ದ ಪರಿಣಾಮ ಮಾರ್ಗಮಧ್ಯೆ ದಿಢೀರ್ ಸ್ಥಗಿತಗೊಂಡಿದೆ.

ಬೆಳಗ್ಗೆ 5.20ಕ್ಕೆ ತಾಳಗುಪ್ಪದಿಂದ ಹೊರಟಿದ್ದ ಈ ರೈಲಿಗೆ ಹೊಸನಗರ ತಾಲೂಕಿನ ಆನೆಕೆರೆ ಮತ್ತು ನೆವಟೂರು ಗ್ರಾಮಗಳ ಮಧ್ಯಭಾಗದಲ್ಲಿ ತಡೆ ಉಂಟಾಗಿದೆ. ಮರ ಬಿದ್ದಿರುವ ಮಾಹಿತಿ ತಿಳಿಯುತ್ತಿದ್ದಂತೆ ಎಚ್ಚೆತ್ತ ರೈಲ್ವೆ ಸಿಬ್ಬಂದಿ, ಸಮಯಪ್ರಜ್ಞೆ ಮೆರೆದು ರೈಲನ್ನು ಸುರಕ್ಷಿತವಾಗಿ ನಿಲ್ಲಿಸಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಹಬ್ಬದ ರಜೆ ಮುಗಿಸಿ ಬೆಂಗಳೂರಿನತ್ತ ಮರಳುತ್ತಿದ್ದ ನೂರಾರು ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ತಲುಪಲಾಗದೆ ಕಂಗಾಲಾಗಿದ್ದಾರೆ. ವಿಷಯ ತಿಳಿದ ತಕ್ಷಣ ರೈಲ್ವೆ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಳಿಯ ಮೇಲಿನ ಮರ ತೆರವುಗೊಳಿಸಲು ಕನಿಷ್ಠ ಒಂದು ಗಂಟೆ ಕಾಲಾವಕಾಶ ಬೇಕಾಗಿದ್ದು, ಕಾರ್ಯಾಚರಣೆ ಪೂರ್ಣಗೊಂಡ ತಕ್ಷಣವೇ ರೈಲು ಸಂಚಾರ ಪುನರಾರಂಭಗೊಳ್ಳಲಿದೆ.

Edited By :
PublicNext

PublicNext

15/09/2026 10:41 am

Cinque Terre

7.58 K

Cinque Terre

0

ಸಂಬಂಧಿತ ಸುದ್ದಿ