ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲವಿಕಾಸ ಅಕಾಡೆಮಿಯಿಂದ ಬೆಳಗಾವಿಯಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ - ಅಡಿವೇಶ ಇಟಗಿ

ಬೆಳಗಾವಿ: ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ನವೆಂಬರ್ ಮೊದಲ ವಾರದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಅಡಿವೇಶ ಇಟಗಿ ಹೇಳಿದರು.

ನಗರದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು,`ಸಮ್ಮೇಳನ ನಡೆಸುವ ಕುರಿತು ಪೂರ್ವಬಾವಿ ಸಭೆ ನಡೆಸಲಾಗಿದೆ. ನಗರದ ಸಿಪಿಇಡಿ ಮೈದಾನದಲ್ಲಿ ಸಮ್ಮೇಳನ ಆಯೋಜಿಸಲು ಉದ್ದೇಶಿಸಲಾಗಿದ್ದು, ಜಿಲ್ಲಾಕಾರಿಯೊಂದಿಗೆ ಸಭೆ ನಡೆಸಿ ದಿನಾಂಕ ಅಂತಿಮಗೊಳಿಸಲಾಗುವುದು. ಮೂರು ದಿನಗಳ ಕಾಲ ಸಮ್ಮೇಳನ ಆಯೋಜಿಸುವ ಚಿಂತನೆ ಇದ್ದು , ಪ್ರತಿದಿನ ರಾಜ್ಯದ ನಾನಾ ಭಾಗಗಳಿಂದ 10 ರಿಂದ 15 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಮಕ್ಕಳೊಂದಿಗೆ ಪಾಲಕರು ಹೇಗೆ ನಡೆದುಕೊಳ್ಳಬೇಕು? ಮಕ್ಕಳಿಗೆ ಮೊಬೈಲ್ ಅಗತ್ಯವೇ? ಮೊಬೈಲ್ ಬಳಕೆ ನಿಯಂತ್ರಿಸುವುದು ಹೇಗೆ? ಎಂಬುದರ ಕುರಿತು ಕೂಡ ಸಮ್ಮೇಳನದಲ್ಲಿ ಅರಿವು ಮೂಡಿಸಲಾಗುವುದು," ಎಂದು ತಿಳಿಸಿದರು.

ಮಕ್ಕಳ ಕಲೆ, ಸಾಹಿತ್ಯ, ನೃತ್ಯ ಸೇರಿದಂತೆ ಇತರ ಕಲೆ ಪ್ರೋತ್ಸಾಹಿಸಲು ಸಮ್ಮೇಳನ ಏರ್ಪಡಿಸಲಾಗುತ್ತಿದೆ. ಮಕ್ಕಳ ಸಾಹಿತಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಬಾಲ ವಿಕಾಸ ಅಕಾಡೆಮಿ ಅಕಾರಿಗಳೊಂದಿಗೆ ಈ ವಿಚಾರವಾಗಿ ಚರ್ಚೆ ಮಾಡಲಾಗಿದೆ. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಾಹಿತಿಗಳನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾಗುವುದು. ಸಾಧಕ ಮಕ್ಕಳಿಗೂ ವಿಶೇಷ ಬಹುಮಾನ ನೀಡಲು ನಿರ್ಧರಿಸಲಾಗಿದೆ," ಎಂದು ಅಡಿವೇಶ ಇಟಗಿ ತಿಳಿಸಿದರು.

Edited By :
PublicNext

PublicNext

17/09/2026 03:02 pm

Cinque Terre

7.83 K

Cinque Terre

0

ಸಂಬಂಧಿತ ಸುದ್ದಿ