ಶಿರಸಿ : 2025-26ನೇ ಸಾಲಿನಲ್ಲಿ ಟಿಎಸ್ಎಸ್ ಸಂಘಕ್ಕೆ ₹23.68 ಕೋಟಿ ನಿವ್ವಳ ಲಾಭವಾಗಿದೆ ಎಂದು ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮತ್ತಿಘಟ್ಟ ತಿಳಿಸಿದ್ದಾರೆ.
ಅವರು ನಗರದ ಪ್ರಸಿದ್ಧ ಟಿಎಸ್ಎಸ್ ಪ್ರಧಾನ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಕಳೆದ ಮೂರು ವರ್ಷಗಳಲ್ಲಿ ಸಂಘದ ಅಭಿವೃದ್ಧಿಗೆ ಕಾರಣಕರ್ತರಾದ ಗ್ರಾಹಕರಿಗೆ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.
ಸಂಘದ ದುಡಿಯುವ ಬಂಡವಾಳ ₹816.48 ಕೋಟಿ ಇದ್ದು, ಸದಸ್ಯರಿಗೆ ವಿತರಿಸಿದ ಸಾಲ ₹971.70 ಕೋಟಿ ಹಾಗೂ ಒಟ್ಟು ₹1,602.75 ಕೋಟಿ ವ್ಯವಹಾರವಾಗಿದೆ ಎಂದು ಹೇಳಿದರು.
ಸಂಘವು ಇತರೆ ಹಣಕಾಸು ಸಂಸ್ಥೆಗಳಲ್ಲಿ ಹೊಂದಿರುವ ಒಟ್ಟು ಠೇವಣಿ, ಶೇರು ಹಾಗೂ ಚಾಲ್ತಿ ಖಾತೆಗಳಲ್ಲಿ ₹505.92 ಕೋಟಿ ಜಮಾ ಆಗಿದ್ದು, ವಿವಿಧ ಬ್ಯಾಂಕ್‌ಗಳಿಂದ ₹356.41 ಕೋಟಿ ಸಾಲ ಪಡೆಯಲಾಗಿದೆ. ಸದಸ್ಯರ ಠೇವಣಿ ₹113.73 ಕೋಟಿ ಇದೆ ಎಂದು ಹೇಳಿದರು.
ಮಾರುಕಟ್ಟೆಯಲ್ಲಿ ಎಲ್ಲಾ ವಿಧದ ಮಹಸೂಲುಗಳ ಒಟ್ಟು ವಿಕ್ರಯ (ಅಡಿಕೆ, ಕಾಳುಮೆಣಸು, ಏಲಕ್ಕಿ, ಹಸಿ ಅಡಿಕೆ ಸೇರಿದಂತೆ) ₹5,46,879 ಕೋಟಿ ಆಗಿದೆ. ಸಂಘದಲ್ಲಿ ಅಡಿಕೆ ವಿಕ್ರಯ ₹2,13.997 ಕೋಟಿ ಆಗಿದ್ದು, ಪ್ರಸಕ್ತ ಸಾಲಿನಲ್ಲಿ ಮಾರುಕಟ್ಟೆಯಲ್ಲಿ ಸಂಘದ ವಿಕ್ರಯದ ಪ್ರಮಾಣ ಶೇ.48.23ರಷ್ಟಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಗಣಪತಿ ಜೋಶಿ, ರವೀಂದ್ರ ಹೆಗಡೆ, ಡಿ.ಎಸ್. ಹೆಗಡೆ, ಪುರುಷೋತ್ತಮ ಹೆಗಡೆ, ವಸಂತ ಹೆಗಡೆ, ನಿರ್ಮಲಾ ಭಟ್ಟ, ಪರಿಣತ ನಿರ್ದೇಶಕ ನರಸಿಂಹ ಹೆಗಡೆ ಹಾಗೂ ಪ್ರಧಾನ ವ್ಯವಸ್ಥಾಪಕ ಗಿರೀಶ ಹೆಗಡೆ ಉಪಸ್ಥಿತರಿದ್ದರು.
Kshetra Samachara
17/09/2026 07:40 pm
LOADING...