ಭಟ್ಕಳ: ಜಾಮ್‌ನಗರ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕರೊಬ್ಬರ ಬಳಿಯಿದ್ದ ₹18 ಸಾವಿರ ನಗದು ಹಾಗೂ 20 ಗ್ರಾಂ ತೂಕದ ಚಿನ್ನದ ಸರ ಕಳುವಾದ ಘಟನೆ ವರದಿಯಾಗಿದೆ.
ಮುಂಬೈನ ನಲಾಸೋಪಾರಾ ಈಸ್ಟ್ ನಿವಾಸಿ, ರೈಲ್ವೆ ಸುರಕ್ಷತಾ ಪಡೆಯ (RPF) ಸಿಬ್ಬಂದಿ ಕುಮಾರಯ್ಯ ಶಂಕರನ್ ಎಂಬವರು ಈ ಕುರಿತು ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಅವರು ಆಗಸ್ಟ್ 18ರಂದು ರೈಲು ಸಂಖ್ಯೆ 19578 ಜಾಮ್‌ನಗರ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕೋಚ್ ಎಸ್/4ರ 07ನೇ ಸೀಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ರಾತ್ರಿ ಸುಮಾರು 1 ಗಂಟೆ ವೇಳೆಗೆ ಮುರ್ಡೇಶ್ವರ ರೈಲು ನಿಲ್ದಾಣದಲ್ಲಿ ರೈಲು ನಿಂತಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಅವರ ಬಳಿಯಿದ್ದ ನಗದು ₹18,000 ಹಾಗೂ ಸುಮಾರು 20 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಕಳುವಾದ ಚಿನ್ನದ ಸರದ ಅಂದಾಜು ಮೌಲ್ಯ ₹2.50 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ. ಒಟ್ಟು ₹2.68 ಲಕ್ಷ ಮೌಲ್ಯದ ನಗದು ಮತ್ತು ಚಿನ್ನ ಕಳುವಾಗಿದ್ದು, ಕಳವು ಮಾಡಿರುವ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
Kshetra Samachara
19/09/2026 08:44 pm
LOADING...