ಚಿತ್ರದುರ್ಗ : ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ–ಹೊಳೆಲ್ಕೆರೆ ಮಾರ್ಗಮಧ್ಯದ ಟಿ. ನುಲೇನೂರು ಬಳಿ ನಡೆದಿದೆ.
ಶಿವಮೊಗ್ಗ ಮೂಲದ ವಿಷ್ಣು ಗಾಯಾಳುವಾಗಿದ್ದು, ಬೈಕ್ ಸವಾರ ಹೊಳೆಲ್ಕೆರೆ ಕಡೆಯಿಂದ ಚಿತ್ರದುರ್ಗದ ಕಡೆಗೆ ತೆರಳುತ್ತಿದ್ದ. ಕಾರು ಚಾಲಕ ಚಿತ್ರದುರ್ಗದಿಂದ ಹೊಳೆಲ್ಕೆರೆ ಕಡೆಗೆ ತೆರಳುತ್ತಿದ್ದ.
ಟಿ. ನುಲೇನೂರು ಬಳಿಯ ಪೆಟ್ರೋಲ್ ಬಂಕ್‌ಗೆ ಕಾರಿಗೆ ಡೀಸೆಲ್ ಹಾಕಿಸಲು ಕಾರು ಚಾಲಕ ತಿರುಗಿಸುವ ವೇಳೆ, ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸುತ್ತಲೇ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಗಾಯಾಳು ವಿಷ್ಣುವನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Kshetra Samachara
17/09/2026 07:52 pm
LOADING...