ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ ಶಾಖಾ ಕಾಲುವೆ ಒಡೆದು ಹಾಕಿದ ಕಿಡಿಗೇಡಿಗಳು: ಅಪಾರ ಪ್ರಮಾಣದ ನೀರು ಪೋಲು

ಚಿತ್ರದುರ್ಗ: ಬರದನಾಡು ಚಿತ್ರದುರ್ಗ ಜಿಲ್ಲೆಗೆ ಭದ್ರೆ ನೀರು ಪ್ರಾಯೋಗಿಕವಾಗಿ ಹರಿಯುತ್ತಿದ್ದು, ಈ ನಡುವೆ ಭದ್ರೆ ನೀರಿನ ಮಾರ್ಗವನ್ನೇ ಕಿಡಿಗೇಡಿಗಳು ಬದಲಿಸಿದ್ದಾರೆ. ಮುಖ್ಯ ಕಾಲುವೆ ಕಡಿದು ನೀರು ಡೈವರ್ಟ್ ಮಾಡಿ, ದುಷ್ಕೃತ್ಯ ಮೆರೆದಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿ ಬಳಿ ಘಟನೆ ಜರುಗಿದೆ.

ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಭದ್ರೆ ನೀರು ಹರಿಯುತ್ತಿದ್ದು, ಇದೇ ಮುಖ್ಯ ಕಾಲುವೆ ಒಡೆದು ನೀರು ಕದ್ದಿರುವ ಅನುಮಾನ ಮೂಡಿದೆ. ಭಾರಿ ಪ್ರಮಾಣದ ಭದ್ರೆ ನೀರು ಪೋಲಾಗಿದ್ದು, ಅಂದಾಜು 50 ಲಕ್ಷ ರೂಪಾಯಿ ಕಾಮಗಾರಿ ಒಡೆದು ಹಾಕಲಾಗಿದೆ. ಮುಖ್ಯ ಕಾಲುವೆ ಒಡೆದು ಹಾಕಿರುವ ಹಿನ್ನೆಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಭದ್ರಾ ಮೇಲ್ದಂಡೆ ಇಂಜಿನಿಯರ್ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಸ್ಥಳಕ್ಕೆ ಪಿಐ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By :
PublicNext

PublicNext

18/09/2026 02:19 pm

Cinque Terre

6.35 K

Cinque Terre

0

ಸಂಬಂಧಿತ ಸುದ್ದಿ