ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ಗೌರಸಮುದ್ರ ಮಾರಮ್ಮ ದೇವಿ ಹುಂಡಿಯಲ್ಲಿ 12.05 ಲಕ್ಷ ಕಾಣಿಕೆ ಸಂಗ್ರಹ

ಚಳ್ಳಕೆರೆ: ತಾಲೂಕಿನ ಪ್ರಸಿದ್ಧ ಗೌರಸಮುದ್ರ ಶ್ರೀ ಮಾರಮ್ಮದೇವಿ ಜಾತ್ರೆ ಭಕ್ತಿಭಾವದಿಂದ ನೆರವೇರಿದ ಬೆನ್ನಲ್ಲೇ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯಿತು. ಜಾತ್ರೆಯ ಸಂದರ್ಭದಲ್ಲಿ ಭಕ್ತರು ದೇವಿಗೆ ಸಮರ್ಪಿಸಿದ್ದ ಕಾಣಿಕೆಯನ್ನು ಎಣಿಕೆ ಮಾಡಲಾಗಿದ್ದು, ಒಟ್ಟು 12,05,450 ಸಂಗ್ರಹವಾಗಿದೆ.

ಅಧಿಕಾರಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷಾ, ಕಂದಾಯ ನಿರೀಕ್ಷಕ ಲಿಂಗೇಗೌಡ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ, ಮಾಜಿ ಸದಸ್ಯ ಶಶಿಕುಮಾರ್, ವಕೀಲ ಚಂದ್ರಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು. ಗೌರಸಮುದ್ರ ಮಾರಮ್ಮದೇವಿಯ ಮೇಲಿನ ಭಕ್ತರ ಅಪಾರ ನಂಬಿಕೆ ಹಾಗೂ ಶ್ರದ್ಧೆಗೆ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಸಾಕ್ಷಿಯಾಗಿದೆ.

Edited By : Somashekar
PublicNext

PublicNext

16/09/2026 10:56 pm

Cinque Terre

5.97 K

Cinque Terre

0

ಸಂಬಂಧಿತ ಸುದ್ದಿ