ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈರುಳ್ಳಿ, ಕೋಳಿ, ಬೆಲ್ಲ ಅರ್ಪಿಸಿ ಭಕ್ತಿ ಸಮರ್ಪಣೆ; ಗೌರಸಮುದ್ರ ಮಾರಮ್ಮ ಜಾತ್ರೆಗೆ ಕಳೆ

ಚಿತ್ರದುರ್ಗ: ಮಧ್ಯ ಕರ್ನಾಟಕದ ಪ್ರಸಿದ್ದ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ಅದ್ದೂರಿಯಾಗಿ ಜರುಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಸಮೀಪ ತುಮ್ಮಲು ಪ್ರದೇಶದಲ್ಲಿ ಬುಡಕಟ್ಟು ಸಂಸ್ಕೃತಿ ಅನಾವರಣಗೊಂಡಿದೆ. ಪ್ರತಿ ವರ್ಷವೂ ಭಾದ್ರಪದ ಮಾಸದ ಮೊದಲ ಮಂಗಳವಾರವೇ ಜಾತ್ರೆ ನಡೆಯುವುದು ಇಲ್ಲಿನ ವಿಶೇಷ. ಮಧ್ಯಾಹ್ನದ ಮಾರಮ್ಮ ಎಂದೇ ಪ್ರಸಿದ್ದಿಯಾಗಿರುವ ದೇವಿ ಮಧ್ಯಾಹ್ನ 1 ಗಂಟೆ ವೇಳೆ ತುಮ್ಮಲು ಪ್ರದೇಶಕ್ಕೆ ಆಗಮಿಸುತ್ತಿದ್ದಂತೆ ನೆರೆದಿದ್ದ ಭಕ್ತ ಸಮೂಹ ಶಿಳ್ಳೆ - ಕೇಕೆ ಹಾಕಿ ಸಂಭ್ರಮಿಸಿದರು. ಬಳಿಕ ಭಕ್ತರು ಈರುಳ್ಳಿ, ಕೋಳಿ, ಚೂರು ಬೆಲ್ಲ ದೇವಿಗೆ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ಈ ವೇಳೆ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ನೆರೆಯ ಆಂದ್ರಪ್ರದೇಶದ ಸೇರಿದಂತೆ ಹಲವು ಕಡೆಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ, ದೇವಿಯ ದರ್ಶನ ಪಡೆದು ಪುನೀತರಾದರು. ಈ ವೇಳೆ ಉಸ್ತುವಾರಿ ಸಚಿವ ಟಿ.ರಘುಮೂರ್ತಿ, ಶಾಸಕ ಎನ್.ವೈ.ಗೋಪಾಲಕೃಷ್ಣ ಸೇರಿ ಹಲವು ಗಣ್ಯರು ಕೂಡಾ ಆಗಮಿಸಿದ್ದರು..

Edited By : Somashekar
PublicNext

PublicNext

15/09/2026 08:21 pm

Cinque Terre

11.14 K

Cinque Terre

0

ಸಂಬಂಧಿತ ಸುದ್ದಿ