ಮಂಗಳೂರು,: ಆನ್‌ಲೈನ್ ಷೇರು ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ಗಳಿಸಬಹುದು ಎಂದು ನಂಬಿಸಿ 60 ವರ್ಷದ ಮಹಿಳೆಯೊಬ್ಬರಿಂದ ಅಪರಿಚಿತರು ಒಟ್ಟು 13.74 ಲಕ್ಷ ರೂ. ಪಡೆದು ವಂಚಿಸಿದ್ದಾರೆ.
ಮಹಿಳೆಯ ವಾಟ್ಸ್ ಆಪ್ ಗೆ wsfx Global Pay/ Quantam Al ಎಂಬ ಹೆಸರಿನಲ್ಲಿ ಷೇರು ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂಬ ಸಂದೇಶ ಮೇ 28ರಂದು ಬಂದಿತ್ತು. ಬಳಿಕ Joshua B Saji ಎಂಬ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ವಿದೇಶಿ ಮೊಬೈಲ್ ಸಂಖ್ಯೆಯಿಂದ ವಾಟ್ಸ್ಆಪ್ ಕರೆ ಮಾಡಿ ಹೂಡಿಕೆಯ ಕುರಿತು ಮಾಹಿತಿ ನೀಡಿದ್ದರು
ಆಮಿಷಕ್ಕೊಳಗಾದ ಮಹಿಳೆ ಮೊದಲಿಗೆ 15,819 ರೂ. ಯುಪಿಐ ಮೂಲಕ ವರ್ಗಾಯಿಸಿದ್ದಾರೆ. ನಂತರ ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಮೇ 28ರಿಂದ ಆಗಸ್ಟ್ 27 ರವರೆಗೆ ಹಂತ ಹಂತವಾಗಿ ನೆಫ್ಟ್ ಹಾಗೂ ಆರ್‌ಟಿಜಿಎಸ್ ಮೂಲಕ 13,58,500 ರೂ. ವರ್ಗಾಯಿಸಿದ್ದಾರೆ. ಒಟ್ಟು 13,74,319 ರೂ. ಪಾವತಿಸಿದ್ದಾರೆ.
ನಂತರ ಹೂಡಿಕೆ ಮಾಡಿದ್ದ ಹಣವನ್ನು ಹಿಂಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಹಿಳೆ ಆರೋಪಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಕರೆಗಳಿಗೆ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡ ಅವರು ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದಾಗ ತಾನು ಆನ್‌ಲೈನ್ ವಂಚನೆಗೆ ಒಳಗಾಗಿದ್ದಾರೆ. ಈ ಬಗ್ಗೆ ಸೈಬರ್ ಅಪರಾಧ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
17/09/2026 10:36 pm
LOADING...