ಮಂಗಳೂರು:ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು 40 ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ ಘಟನೆ ಸಜೀಪಮುನ್ನೂರು ಗ್ರಾಮದಲ್ಲಿ ನಡೆದಿದೆ.
ಸಜೀಪಮುನ್ನೂರು ಗ್ರಾಮದ ಪ್ರಪುಲ್ಲಾ ಜಾನೆಟ್ ಡಿಕ್ರೂಸ್ ಅವರ . ಮನೆಯಲ್ಲಿ ಕಳ್ಳತನ ನಡೆದಿದ್ದು ಸೆ.14ರಂದು ಸಂಜೆ ಅವರು ಮಕ್ಕಳೊಂ ದಿಗೆ ಬೆಳ್ಳಾರೆಗೆ ಹೋಗಿದ್ದರು. ಸೆ.15 ರಂದು ಬೆಳಗ್ಗೆ ಬಂದು ಮನೆಯೊಳಗೆ ಹೋದಾಗ ಮನೆಯ ಬೆಡ್ ರೂಮಿನ
ಮಂಚದಲ್ಲಿದ್ದ ಬೆಡ್ ಅನ್ನು ಸರಿಸಿದ್ದು ಕಂಡು ಬಂದಿದೆ. ರೂಮಿನ ಒಳಗಿನ ವಾರ್ಡ್ ರೂಬ್ ನ ಬಾಗಿಲನ್ನು ತೆರೆದು ಬಟ್ಟೆಗಳನ್ನು ಚೆಲ್ಲಾ ಪಿಲ್ಲಿ ಮಾಡಿದ್ದು ಕಂಡು ಬಂದಿದ್ದು ಕಳ್ಳತನ ಆಗಿರುವ ಅಂಶ ಬೆಳಕಿಗೆ ಬಂದಿದೆ.
ವಾರ್ಡ್ ರೂಬ್ ನಲ್ಲಿ ಇಟ್ಟಿದ್ದ 2 ಜತೆ ಚಿನ್ನದ ಕಿವಿಯೋಲೆ ಕಳವಾಗಿದೆ. ಜತೆಗೆ ಮನೆಯ ಸೋಪಾದಲ್ಲಿ ಡಬ್ಬದಲ್ಲಿ ಇಟ್ಟಿದ್ದ ನಗದು 5000 ರೂ. ಕಳವಾಗಿದೆ. ಮನೆಯ ಇನ್ನೊಂದು ವಾರ್ಡ್ ರೂಬ್ ನ ಬಾಗಿಲನ್ನು ತೆರೆದು ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ
ಅಲ್ಲಿಯೂ ಹುಡುಕಾಟ ನಡೆಸಿದ್ದಾರೆ.
ಮನೆಯ ವರ್ಕ್ ಏರಿಯಾದಲ್ಲಿದ್ದ ಕಬ್ಬಿಣದ ಬಾಗಿಲಿಗೆ ಹಾಕಿದಬೀಗವನ್ನು ಮುರಿದು, ಅನಂತರ ಮನೆಯ ಹಿಂಬದಿಗೆ ಅಳವಡಿಸಿದ ಮರದ ಬಾಗಿಲನ್ನು ಮುರಿದು ಕಳ್ಳರು ಮನೆಯ ಒಳಪ್ರವೇಶಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಡೆದ ಘಟನೆ। ಪೊಲೀಸ್ ತಂಡದಿಂದ ಪರಿಶೀಲನೆ |ಮನೆಯಮಂದಿ ಬೆಳ್ಳಾರೆಗೆ ಹೋಗಿ ಬರುವಷ್ಟರಲ್ಲಿ ಕೈಚಳಕ ತೋರಿದ ಕಳ್ಳರುಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ ರಿಂದ ತನಿಖೆ ನಡೆಯುತ್ತಿದೆ.
Kshetra Samachara
17/09/2026 10:41 pm
LOADING...