ರಾಯಬಾಗ : ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಯಲ್ಲಾಲಿಂಗ ಮಹಾರಾಜರ ಬೃಹನ್ಮಠದಲ್ಲಿ ಮುಗಳಖೋಡ - ಜಿಡಗಾ ಮಠದ ಪೀಠಾಧಿಪತಿಗಳಾದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿಯವರ ಆಜ್ಞೆಯಂತೆ ಗಣೇಶ ಚತುರ್ಥಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ನಾಲ್ಕನೇ ದಿನವಾದ ಗುರುವಾರದಂದು ಶ್ರೀಮಠದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ವಿಗ್ರಹಕ್ಕೆ ಮಂತ್ರ ಪಠಣೆ, ಶ್ಲೋಕಗಳ ಮೂಲಕ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರಮವು ಶ್ರೀಮಠದ ಮಹಾರಾಜರಾದ ಶ್ರೀ ಜಗದೀಶ್ ಮಹಾರಾಜರ ನೇತೃತ್ವದಲ್ಲಿ ನೆರವೇರಿತು. ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನೂ ಆಚರಿಸಿ ಸಂಭ್ರಮಿಸಿದರು.
ವರದಿ : ಚಿದಾನಂದ ಐಹೊಳೆ, ಪಬ್ಲಿಕ್ ನೆಕ್ಸ್ಟ್ ರಾಯಬಾಗ
PublicNext
18/09/2026 01:14 pm
LOADING...