ಬೆಳಗಾವಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಗೋಕಾಕ್‌ನ ಧೂಪದಾಳ ಗ್ರಾಮದ ಲಕ್ಷ್ಮೀ ದೇವಸ್ಥಾನದಲ್ಲಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಡಾ. ಹೇಮಾವತಿ ವಿ. ಹೆಗ್ಗಡೆಯವರ ಆಶೀರ್ವಾದದಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿ ಹಾಗೂ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರ ಉತ್ತಮ ಆರೋಗ್ಯ ಕಾಪಾಡುವ ಉದ್ದೇಶದಿಂದ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ರೋಹಿತ್ ಎಚ್. ಸೇರಿದಂತೆ ರಾಜು ಗಾಡಿ ವಡ್ಡರ್, ಶೆಟ್ಟೆಪ್ಪ ಗಾಡಿ ವಡ್ಡರ್, ಕರಿಯಪ್ಪ ಕಡಹಟ್ಟಿ, ವಿಠಲ ಗಾಡಿ ವಡ್ಡರ್, ಲಗಮಣ್ಣ ಗಾಡಿ ವಡ್ಡರ್, ರಾಯಪ್ಪ ಬಂಡಿ, ಲಾಲಬಿ ಅಂಕಲಗಿ, ಶಾರದಾ ಬಂಡಿರವಿ ನಾವಿ, ರೆಹಮಾನ ಮಕಾಶಿ ಹಾಗೂ ಮಲ್ಲೇಶ್ ಗಡಿವಡ್ಡರ ಮತ್ತಿತರರು ಭಾಗವಹಿಸಿದ್ದರು.
ಜಯರತ್ನ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿ ಅಮೃತ್ ಪಾಟೀಲ್ ಅವರು ಶಿಬಿರದಲ್ಲಿ ಸದಸ್ಯರ ನೇತ್ರ ತಪಾಸಣೆ ನಡೆಸಿ, ಕಣ್ಣಿನ ಆರೋಗ್ಯದ ಬಗ್ಗೆ ಅಗತ್ಯ ಮಾಹಿತಿ ಹಾಗೂ ಸಲಹೆಗಳನ್ನು ನೀಡಿದರು.
ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಸದಸ್ಯರು ಉತ್ತಮ ಜೀವನ ನಡೆಸಲು ನೆರವಾಗುವುದು ಶಿಬಿರದ ಪ್ರಮುಖ ಉದ್ದೇಶವಾಗಿತ್ತು.
Kshetra Samachara
20/09/2026 10:55 am
LOADING...