ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಶಿವಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ

ಬೆಳಗಾವಿ : ನಾವು ಮಾಡಿದ ಕಾರ್ಯದ ಫಲಿತಾಂಶದ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ, ಕರ್ತವ್ಯದ ಮೇಲೆ ಗಮನ ಹರಿಸಿ. ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಎಂದಿಗೂ ಇದ್ದೇ ಇದೆ. ನಾವು ಬಿತ್ತಿದ ಬೀಜವೇ ಮರವಾಗುವಂತೆ, ನಾವು ಮಾಡುವ ಒಳ್ಳೆಯ ಅಥವಾ ಕೆಟ್ಟ ಕೆಲಸಗಳೇ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ ಅನ್ನುವಂತಹ ಕೃಷ್ಣನ ಸಂದೇಶಗಳು ಇಂದಿಗೂ ಮನುಕುಲಕ್ಕೆ ದಾರಿದೀಪವಾಗಿವೆ ಎಂದು ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್‌.ಪಿ. ಹಿರೇಮಠ ಅಭಿಪ್ರಾಯ ಪಟ್ಟರು. ಅವರು ಇತ್ತೀಚಿಗೆ ಶಿವಬಸವ ನಗರದ ಶಿವಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ನಿರ್ಣಾಯಕರಾಗಿ ಆಗಮಿಸಿದ್ದ ಕುಮಾರಿ ಪ್ರಾಚಿ ವರ್ಣೇಕರ್ ಮತ್ತು ಕುಮಾರಿ ದಿವ್ಯಶ್ರೀ ಬಾಗೇವಾಡಿ ಅವರು ಕೃಷ್ಣನ ಜೀವನ ಸಂದೇಶದ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ವೇಷ ಭೂಷಣದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ರಾಧೆ ಕೃಷ್ಣನ ವೇಷವನ್ನು ಧರಿಸಿ ಉತ್ಸಾಹದಿಂದ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾoಶುಪಾಲೆ ಪೂಜಾ ನಾಯಕ, ಶಿಕ್ಷಕರಾದ ಕಾರ್ತಿಕ ನಾಯ್ಕ, ಸ್ವಾತಿ ಪೂಜೇರಿ, ಪೂನಂ ನಾಯ್ಕ, ಶಿಲ್ಪಾ ಜೋಷಿ, ಭಾರತಿ ಕಾಂಬ್ಳೆ, ಸ್ನೇಹಾ ಗುಂಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಆರಂಭದಲ್ಲಿ ಕುಮಾರಿ ಶ್ರಾವಣಿ ಶೇರವಿ ಸ್ವಾಗತಿಸಿದರು. ಕುಮಾರಿ ಪಲ್ಲವಿ ಮತ್ತು ಗಗನ ಪರಿಚಯಿಸಿದರು. ಕೊನೆಗೆ ವೇದಾಂತ ಗೌಂಡಿ ವಂದಿಸಿದರು.

Edited By :
PublicNext

PublicNext

17/09/2026 02:42 pm

Cinque Terre

9.01 K

Cinque Terre

0

ಸಂಬಂಧಿತ ಸುದ್ದಿ