ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ : ಬಾರಕೂರಿನಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ

ಬ್ರಹ್ಮಾವರ : ಕನ್ಯಾ ಸಂಕ್ರಮಣದ ದಿನದಂದು ರಾಷ್ಟ್ರಾದ್ಯಂತ ನಡೆಯುವ ವಿಶ್ವಕರ್ಮ ಪೂಜಾ ಮಹೋತ್ಸವದ ಅಂಗವಾಗಿ ಗುರುವಾರ ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ ಜರುಗಿತು.

ಕ್ಷೇತ್ರದ ತಂತ್ರಿಗಳಾದ ಪ್ರಕಾಶ್ ಪುರೋಹಿತ್ ಅವರು ಪೂಜಾ ಕಾರ್ಯ ನೆರವೇರಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಬಂಡೀಮಠ ಪ್ರಭಾಕರ ಆಚಾರ್ಯ ಹಾಗೂ ಶ್ರೀಮತಿ ಸುಲೋಚನ ಆಚಾರ್ಯ ದಂಪತಿಗಳು ಸಂಕಲ್ಪ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ನಾನಾ ಭಾಗಗಳಿಂದ ಆಗಮಿಸಿದ ಅನೇಕರು ಪೂಜಾ ಕಾರ್ಯದಲ್ಲಿ ಭಾಗವಹಿಸಿದರು. ಬಳಿಕ ದೇವಸ್ಥಾನದಿಂದ ನಡೆಯುವ ಭೋಜನ ಪ್ರಸಾದವನ್ನು ಸ್ವೀಕರಿಸಿದರು.

Edited By :
PublicNext

PublicNext

19/09/2026 05:11 pm

Cinque Terre

3.39 K

Cinque Terre

0

ಸಂಬಂಧಿತ ಸುದ್ದಿ