ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ : ಸಾರ್ವಜನಿಕ ಗಣೇಶೋತ್ಸವದಲ್ಲಿ ಹುಲಿವೇಷಗಳ ಅಬ್ಬರ

ಬ್ರಹ್ಮಾವರ : 44ನೇ ವರ್ಷದ ಬ್ರಹ್ಮಾವರ ಸಾರ್ವಜನಿಕ ಶ್ರೀ ಗಣೇಶೋತ್ಸವ 5 ದಿನಗಳ ಕಾಲ ನಾನಾ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳೊಂದಿಗೆ ಜರುಗಿತು. ಶುಕ್ರವಾರ ನಾನಾ ವಿಸರ್ಜನಾ ಪೂಜೆಯೊಂದಿಗೆ ರಥಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗಿಬಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸರೋವರದಲ್ಲಿ ಜಲಸ್ಥಂಭನ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಗಣೇಶೋತ್ಸವದ ಅಂಗವಾಗಿ ಹಲವಾರು ಹುಲಿವೇಷಗಳ ತಂಡಗಳಿಂದ ಇಲ್ಲಿನ ವೇದಿಕೆಯಲ್ಲಿ ನಾನಾ ವೇಷಗಳ ಹಾಗೂ ಹುಲಿವೇಷ ಕುಣಿತದ ಪ್ರದರ್ಶನ ನಡೆಯಿತು. ಕಳೆದ 40 ವರ್ಷಗಳಿಂದ ಗಣೇಶೋತ್ಸವದಲ್ಲಿ ಗಣಪತಿ ವೇಷವನ್ನು ಹಾಕಿ ಭಕ್ತರು ನೀಡಿದ ಹಣವನ್ನು ಸಮಿತಿಗೆ ನೀಡುತ್ತಿರುವ 75 ವರ್ಷದ ತೋನ್ಸೆ ವಾಮನ ಪೈ ಅವರೂ ಕೂಡ ಪ್ರದರ್ಶನ ನೀಡಿದರು. ಸಮಿತಿಯ ಉಪಾಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ವೀಕ್ಷಕ ವಿವರಣೆ ನೀಡಿದರು.

ಸಮಿತಿಯ ಗೌರವಾಧ್ಯಕ್ಷ ಭಾಸ್ಕರ ರೈ, ಅಧ್ಯಕ್ಷ ರಘುಪತಿ ಬ್ರಹ್ಮಾವರ, ಪ್ರಧಾನ ಕಾರ್ಯದರ್ಶಿ ಸತೀಶ್ ಕೋಟ್ಯಾನ್, ಕೋಶಾಧಿಕಾರಿ ಉಲ್ಲಾಸ ನಾಯಕ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉತ್ಸವದ ಯಶಸ್ಸಿಗೆ ಶ್ರಮಿಸಿದ್ದರು.

Edited By : Vinayak Patil
PublicNext

PublicNext

19/09/2026 07:00 pm

Cinque Terre

5.27 K

Cinque Terre

0

ಸಂಬಂಧಿತ ಸುದ್ದಿ