ಮುಲ್ಕಿ: ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಸಚಿವರಾದ ಕೆ.ಬಸವಂತಪ್ಪನವರು ಶುಕ್ರವಾರ ಶ್ರೀ ಕ್ಷೇತ್ರ ಬಪ್ಪನಾಡು ಸ್ತ್ರೀ ದುರ್ಗಪರಮೇಶ್ವರೀ ದೇವಳಕ್ಕೆ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಪಡೆದರು.
ಶ್ರೀ ದೇವಳದ ವತಿಯಿಂದ ಶ್ರೀ ದೇವಳದ ಅನುವಂಶಿಕ ಮೊಕ್ತಸರ ದುಗ್ಗಣ್ಣ ಸಾವಂತರು, ಧಾರ್ಮಿಕ ದತ್ತಿ ಇಲಾಖೆಯ ಎಸಿ ಜಯಮ್ಮ, ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಅರ್ಚಕದ್ವಯರಾದ ಶ್ರೀಪತಿ ಉಪಾಧ್ಯಾಯ ಮತ್ತು ನರಸಿಂಹ ಭಟ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಯದುನಾರಾಯಣ ಶೆಟ್ಟಿ ಸಚಿವರನ್ನು ಶ್ರೀ ದೇವಿಯ ಪ್ರಸಾದದೊಂದಿಗೆ ಗೌರವಿಸಿದರು.
ಈ ಸಂದರ್ಭ ಪ್ರಮುಖರಾದ ರಾಮಚಂದ್ರ ನಾಯ್ಕ್ ಕೊಲ್ನಾಡುಗುತ್ತು, ಕಿರಣ್ ಶೆಟ್ಟಿ ಕೊಲ್ನಾಡುಗುತ್ತು, ಸುಜಿತ್ ಎಸ್.ಸಾಲ್ಯಾನ್, ಪ್ರವೀಣ್ ಕುಡುಪು, ಸುನಿಲ್ ಆಳ್ವ, ಡಾ.ಹರಿಕೃಷ್ಣ ಪುನರೂರು ಚಂದ್ರಶೇಖರ ಸುವರ್ಣ, ಸಂಜೀವ ದೇವಾಡಿಗ, ನಾಗೇಶ್ ಬಪ್ಪನಾಡು, ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್, ಭಾಸ್ಕರ ಸಾಲ್ಯಾನ್, ಪುರಂದರ ಶೆಟ್ಟಿಗಾರ್, ಕಾಂಗ್ರೆಸ್ ಪ್ರಮುಖರಾದ ವಸಂತ್ ಬೆರ್ನಾರ್ಡ್, ಮೋಹನ್ ಕೋಟ್ಯಾನ್, ರಕ್ಷಿತ್ ಪೂಜಾರಿ, ದಿವ್ಯಾ ಎಸ್.ಕೋಟ್ಯಾನ್, ಭೀಮಾಶಂಕರ್ ಆರ್‌ಕೆ, ಮಂಜುನಾಥ್ ಆರ್‌ಕೆ, ಧರ್ಮಾನಂದ ಶೆಟ್ಟಿಗಾರ್, ಅಶೋಕ್ ಪೂಜಾರಿ, ಬಾಲಚಂದ್ರ ಕಾಮತ್, ಮತ್ತು ಉದಯ ಶೆಟ್ಟಿ ಅದಿಧನ್, ಅರ್ಚಕರಾದ ಪ್ರಸಾದ್ ಭಟ್, ಗೋಪಾಲಕೃಷ್ಣ ಭಟ್, ಅಕೌಂಟೆಂಟ್ ಶಿವಶಂಕರ್ ವರ್ಮ, ಕಾರ್ತಿಕ್ ಕೊಳಚಿಕಂಬಳ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಜೀರ್ಣೋದ್ದಾರ ಹಂತದಲ್ಲಿರುವ ಶ್ರೀ ದೇವಳದ ಬಗ್ಗೆ ಮನವಿ ಪತ್ರವನ್ನು ಸಚಿವರಿಗೆ ಹಸ್ತಾಂತರಿಸಲಾಯಿತು
Kshetra Samachara
18/09/2026 08:28 pm
LOADING...