ಮಂಗಳೂರು: ಸಿಎಂ ಡಿ.ಕೆ. ಶಿವಕುಮಾರ್ ಭೇಟಿ ಹಿನ್ನೆಲೆಯಲ್ಲಿ ಮೀನುಗಾರಿಕಾ ಧಕ್ಕೆಯ ಚಟುವಟಿಕೆಗಳನ್ನು ಬಂದ್ ಮಾಡಿಸಿದ್ದಕ್ಕೆ ಅಧಿಕಾರಿಗಳ ವಿರುದ್ಧ ಸಿಎಂ ಗರಂ ಆಗಿದ್ದಾರೆ. ಮೀನುಗಾರರು ಹಾಗೂ ವ್ಯಾಪಾರಸ್ಥರ ಚಟುವಟಿಕೆಗಳನ್ನು ನಿಲ್ಲಿಸಿದ ಅಧಿಕಾರಿಗಳನ್ನು ಇಂದೇ ಅಮಾನತು ಮಾಡುವಂತೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
“ನಾನು ಇಲ್ಲಿಗೆ ಬರುವಾಗ ಇಡೀ ಧಕ್ಕೆಯ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಇದರಿಂದ ನನಗೆ ಕಿಂಚಿತ್ತೂ ಸಮಾಧಾನವಿಲ್ಲ. ಇಲ್ಲಿನ ವಾಸ್ತವ ವಹಿವಾಟು ಹಾಗೂ ಜನರ ಸಮಸ್ಯೆಗಳನ್ನು ಕಣ್ಣಾರೆ ನೋಡಲೆಂದೇ ಬಂದಿದ್ದೇನೆ. ನನಗೆ ಯಾವುದೇ ಸೆಕ್ಯೂರಿಟಿ ಅಗತ್ಯವಿಲ್ಲ. ವ್ಯಾಪಾರ ನಿಲ್ಲಿಸಿದ ಬಗ್ಗೆ ವರದಿ ಕೇಳಿದ್ದೇನೆ. ಅಧಿಕಾರಿಗಳು ಭಾಗಿಯಾಗಿರುವುದು ಕಂಡುಬಂದರೆ ಇಂದೇ ಅಮಾನತು ಮಾಡುತ್ತೇವೆ. ವ್ಯಾಪಾರ-ವಹಿವಾಟು ಎಂದಿನಂತೆ ನಡೆಯಬೇಕು,” ಎಂದು ಡಿಕೆಶಿ ಹೇಳಿದರು.
PublicNext
19/09/2026 10:01 pm
LOADING...