ಮಂಗಳೂರು: ಮಂಗಳೂರು ಧಕ್ಕೆಗೆ ಶನಿವಾರ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೀನುಗಾರರು ಮಾರಾಟ ಮಾಡುತ್ತಿದ್ದ ಮೀನುಗಳನ್ನು ವೀಕ್ಷಿಸಿ ಬೆಲೆ ವಿಚಾರಿಸಿದರು. ಈ ವೇಳೆ ಅವರು ಮೀನುಗಾರರು ಮಾರಾಟಕ್ಕೆ ಇಟ್ಟಿದ್ದ 10-12 ಕೆಜಿ ತೂಕದ ಬೃಹತ್ ಅಂಜಲ್ ಮೀನನ್ನು ಕೈಯಲ್ಲಿ ಹಿಡಿದು ವೀಕ್ಷಿಸಿದರು. "ಅಂಜಲ್ ಮೀನು ಕೆಜಿಗೆ ₹750ರಂತೆ ಒಂದೇ ಮೀನಿಗೆ ₹8,000 ರೂ. ವರೆಗೆ ಮಾರಾಟವಾಗುತ್ತದೆ. 49 ದಿನಗಳ ಕಾಲ ಸಮುದ್ರದಲ್ಲಿದ್ದು ಹಿಡಿದ ಮೀನು ಇದು" ಎಂದು ಮೀನುಗಾರರು ವಿವರಿಸಿದಾಗ ಬೆಲೆ ಹಾಗೂ ತೂಕ ಕೇಳಿ ಸಿಎಂ ಅಚ್ಚರಿ ವ್ಯಕ್ತಪಡಿಸಿದರು.
PublicNext
20/09/2026 10:43 am
LOADING...