ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಂಸ್ಕೃತಿಕ ನಗರಿಯಲ್ಲಿ ಪರಿಸರ ಪ್ರೇಮ!

ಮೈಸೂರು : ಮೈಸೂರಿನ ಸಾತಗಳ್ಳಿಯಲ್ಲಿ ನಡೆಯುತ್ತಿರುವ ಕಂಬಳದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಸಂದೇಶ ಸಾರಲು ಫಾರೆಸ್ಟ್ SOS ತಂಡ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಫಾರೆಸ್ಟ್ SOS ತಂಡವು ಮೈಸೂರು ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕ ಅಶೋಕ್ ಕುಮಾರ್ ರೈ ಅವರ ಜೊತೆಗೂಡಿ ಕಂಬಳದ ಸುತ್ತಮುತ್ತ ಸ್ಥಳೀಯ ಜಾತಿಯ 250 ಸಸಿಗಳನ್ನು ನೆಡುವ ಗುರಿ ಹೊಂದಿದೆ. ಇದೀಗ ಸಾಂಕೇತಿಕವಾಗಿ ಎರಡು ಗಿಡಗಳನ್ನು ನೆಡುವ ಮೂಲಕ ನಿನ್ನೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸಾಂಸ್ಕೃತಿಕ ಪರಂಪರೆಯ ಸಂಭ್ರಮದ ಜೊತೆಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನೂ ನಿಭಾಯಿಸಬಹುದು ಎಂಬ ಸಂದೇಶವನ್ನು ಈ ಮೂಲಕ ಸಾರಲಾಗುತ್ತಿದೆ.

Edited By :
PublicNext

PublicNext

20/10/2026 07:37 am

Cinque Terre

7.17 K

Cinque Terre

0

ಸಂಬಂಧಿತ ಸುದ್ದಿ