ನಾಡಹಬ್ಬ ದಸರಾದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಪಂಜಿನ ಮೈದಾನದಲ್ಲಿ ರಿಹರ್ಸಲ್ ವೇಳೆ ಕಸರತ್ತು ನಡೆಯುತ್ತಿದ್ದಾಗ ಪೊಲೀಸರ ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದೆ.
ಇಂದು ಬೈಕ್‌ನಲ್ಲಿ ಸಾಹಸ ಪ್ರದರ್ಶನ ಮಾಡುತ್ತಿದ್ದ ಪೊಲೀಸರ ತಾಲೀಮಿನ ವೇಳೆ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಬೈಕ್ ಸವಾರಿ ನಡೆಸುತ್ತಿದ್ದ ಪೊಲೀಸರಿಗೆ ಗಾಯಗಳಾಗಿವೆ.
ಅಪಘಾತದ ಹಿನ್ನೆಲೆಯಲ್ಲಿ ಪೊಲೀಸರು ಕಸರತ್ತನ್ನು ಅರ್ಧಕ್ಕೆ ಮೊಟಕುಗೊಳಿಸಿ ಮೈದಾನದಿಂದ ಹೊರನಡೆದಿದ್ದಾರೆ. ನಾಳೆ ಸಂಜೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ರಿಹರ್ಸಲ್ ನಡೆಯಲಿದ್ದು, ಸಶಸ್ತ್ರ ಪೊಲೀಸ್ ಮೋಟಾರ್‌ಸೈಕಲ್ ಪ್ರದರ್ಶನವೂ ಇರಲಿದೆ.
PublicNext
20/10/2026 09:03 am
LOADING...