ಮೈಸೂರು : ದಸರಾ ನೋಡಲು ಬಂದ ಎಳೆಯ ಕಂದನಿಗೆ ಪೊಲೀಸ್ ಲಾಠಿ ಏಟು ಬಿದ್ದಿದ್ದು, ತಲೆಗೆ ಪೆಟ್ಟು ಬಿದ್ದು ರಕ್ತದ ಮಡುವಿನಲ್ಲಿ ಕಂದಮ್ಮ ನರಳಿದೆ.
ಹೈವೇ ಸರ್ಕಲ್‌ನಲ್ಲಿ ಕಂದನ ರೋದನ ಮುಗಿಲು ಮುಟ್ಟಿತ್ತು. ಜಂಬೂಸವಾರಿ ಮೆರವಣಿಗೆ ವೇಳೆ ಹೈವೇ ಸರ್ಕಲ್ ಬಳಿ ಜನದಟ್ಟಣೆ ನಿಯಂತ್ರಿಸುವಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಪೊಲೀಸರು ಏಕಾಏಕಿ ಲಾಠಿ ಬೀಸಿದ ಪರಿಣಾಮ, ಪಕ್ಕದಲ್ಲೇ ನಿಂತಿದ್ದ ಪುಟ್ಟ ಮಗುವಿನ ಮೃದು ತಲೆಗೆ ಲಾಠಿಯ ತುದಿ ಬಡಿದಿದೆ ಎಂಬ ಆರೋಪ ಕೇಳಿಬಂದಿದೆ. ಏಟಿನ ರಭಸಕ್ಕೆ ಮಗುವಿನ ತಲೆಯಿಂದ ರಕ್ತ ಚಿಮ್ಮಿದೆ. ಗಾಬರಿಗೊಂಡ ಪೋಷಕರು ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ಓಡಿದ್ದಾರೆ. ಇದು ಆಕಸ್ಮಿಕವೋ ಅಥವಾ ಪೊಲೀಸರ ನಿರ್ಲಕ್ಷ್ಯವೋ ಎಂದು ಆಕ್ರೋಶ ವ್ಯಕ್ತವಾಗಿದೆ.
PublicNext
22/10/2026 10:35 am
LOADING...