ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಮಧ್ಯೆ ಗಲಾಟೆ, ನೂತನ ಎಂಎಲ್‌ಸಿ ಕೆ.ಎಂ. ಸುರೇಶ್‌ಗೆ ತರಾಟೆ

ದಾವಣಗೆರೆ: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ನೂತನ ಎಂಎಲ್‌ಸಿ ಕೆ.ಎಂ. ಸುರೇಶ್ ಅವರ ಅಭಿನಂದನಾ ಕಾರ್ಯಕ್ರಮವು ಕಾರ್ಯಕರ್ತರ ನಡುವಿನ ತೀವ್ರ ವಾಗ್ವಾದ ಹಾಗೂ ಗದ್ದಲಕ್ಕೆ ಸಾಕ್ಷಿಯಾಗಿದೆ.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಪ್ರಮುಖ ನಾಯಕರ ಸಮ್ಮುಖದಲ್ಲೇ ಕೆಲ ಕಾರ್ಯಕರ್ತರು ಕೆ.ಎಂ. ಸುರೇಶ್ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ಏರುಧ್ವನಿಯಲ್ಲಿ ಆಕ್ರೋಶ ಹೊರಹಾಕಿದ್ದು, ಪರಸ್ಪರ ಮಾತಿನ ಚಕಮಕಿ ನಡೆದಿದೆ. ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಕಾಲಿಗೆ ಬಿದ್ದು ಕೆ.ಎಂ. ಸುರೇಶ್ ಸಹಕಾರ ಕೋರಿದ್ದರು ಎನ್ನಲಾದ ವಿಚಾರವೇ ಈ ಹಂಗಾಮಕ್ಕೆ ಮುಖ್ಯ ಕಾರಣವಾಯಿತು. ಕಾರ್ಯಕ್ರಮದ ವೇಳೆ ಈ ವಿಷಯವನ್ನು ಪ್ರಸ್ತಾಪಿಸಿದ ಕಾರ್ಯಕರ್ತರು, "ನಾವೇನು ಹೆಬ್ಬೆಟ್ಟುಗಳಾ?" ಎಂದು ನಾಯಕರನ್ನು ನೇರವಾಗಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

ಅಲ್ಲದೆ, "ನಿಮ್ಮ ಈ ಹೊಂದಾಣಿಕೆ ರಾಜಕಾರಣವನ್ನು ನೋಡಲು ನಮಗೆ ಡಾಟಾನೇ ಸಾಲುತ್ತಿಲ್ಲ" ಎಂದು ತೀವ್ರ ಕಿಡಿಕಾರಿದರು.ಕಾರ್ಯಕರ್ತರ ನಡುವೆ ವಾಗ್ವಾದ ವಿಕೋಪಕ್ಕೆ ಹೋಗುತ್ತಿದ್ದಂತೆ, ಸ್ಥಳದಲ್ಲಿದ್ದ ಹಿರಿಯ ಮುಖಂಡರು ಅಸಮಾಧಾನಗೊಂಡಿದ್ದವರನ್ನು ಸಮಾಧಾನಪಡಿಸಲು ಹರಸಾಹಸ ಪಟ್ಟ ಪ್ರಸಂಗ ನಡೆಯಿತು.

Edited By :
PublicNext

PublicNext

31/10/2026 07:38 pm

Cinque Terre

8.45 K

Cinque Terre

0

ಸಂಬಂಧಿತ ಸುದ್ದಿ