ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಶ್ರಾವ್ಯಾ ಶೆಟ್ಟಿ ಮಾತು: ನಾನು ಮತ್ತು ತಾಯಿ ಸಾಕಷ್ಟು ದೌರ್ಜನ್ಯ ಅನುಭವಿಸಿದ್ದೇವೆ, ನಮ್ಮನ್ನು ಕೊಲೆ ಮಾಡಲು ಪ್ರದೀಪ್ ಬಂದಿದ್ದ

ಉಡುಪಿ : ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ ಪ್ರದೀಪ್ ಸಾವಿಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಡಿ ಪೆರ್ಡೂರಿನ ದಿಲೀಪ್ ಕುಮಾರ್ ಅವರು ನೀಡಿದ ದೂರಿನಂತೆ 10ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ, ಪ್ರದೀಪ್ ಪ್ರೀತಿಸುತ್ತಿದ್ದ ಯುವತಿ ಶ್ರಾವ್ಯಾ ಶೆಟ್ಟಿ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

"ಪ್ರದೀಪ್ ಪೂಜಾರಿ ಮೇಲೆ ಒಂದು ವರ್ಷದ ಹಿಂದೆಯೇ ನಾವು ದೂರು ದಾಖಲಿಸಿದ್ದೆವು. ಆ ಬಳಿಕ ನಿರಂತರವಾಗಿ ದೌರ್ಜನ್ಯ ಎಸಗಿದ್ದಾನೆ. ನಾವು ಕೇಸ್ ಹಾಕಿದ ಬಳಿಕವೂ ಬೆದರಿಕೆ ಹಾಕಿದ್ದಾನೆ. ನಂತರ ಕೊಲೆಯತ್ನವನ್ನೂ ಮಾಡಿದ್ದಾನೆ. ಬಳಿಕ ಆರು ತಿಂಗಳು ಜೈಲಿನಲ್ಲಿದ್ದ. ಮತ್ತೆ ಜಾಮೀನಿನ ಮೇಲೆ ಹೊರಬಂದ ನಂತರವೂ ನನ್ನನ್ನು ಮತ್ತು ತಾಯಿಯನ್ನು ಕೊಲೆ ಮಾಡಲು ಬಂದಿದ್ದ. ತಾಯಿಯ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದಾನೆ. ಹೇಗೋ ನಾವು ತಪ್ಪಿಸಿಕೊಂಡೆವು. ನಾವು ಕಾನೂನು ಪ್ರಕಾರವೇ ಹೋದರೂ ಜನರು ನಾವೇ ತಪ್ಪು ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಅವನ ದೌರ್ಜನ್ಯದ ವಿರುದ್ಧ ನಾವು ದೂರು ಕೊಟ್ಟಿದ್ದೇ ತಪ್ಪಾ?" ಎಂದು ಶ್ರಾವ್ಯ ಪ್ರಶ್ನಿಸಿದ್ದಾರೆ.

ಅಂದಹಾಗೆ, ಪ್ರದೀಪ್ ಪೂಜಾರಿ ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.

Edited By :
PublicNext

PublicNext

02/11/2026 02:03 pm

Cinque Terre

12.66 K

Cinque Terre

2

ಸಂಬಂಧಿತ ಸುದ್ದಿ