ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸೌಜನ್ಯಾ ಮರುತನಿಖೆ ಪ್ರಕರಣ- ವಿಚಾರಣೆಗೆ ಎಸ್ಐಟಿ ಕಚೇರಿಗೆ ಆಗಮಿಸಿದ ಸೌಜನ್ಯಾ ತಾಯಿ, ಸಂಬಂಧಿಗಳು

ಮಂಗಳೂರು : ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಎಸ್ಐಟಿ ವಿಚಾರಣೆ ಚುರುಕುಗೊಂಡಿದೆ. ಸೌಜನ್ಯಾ ಅವರ ತಾಯಿ ಹಾಗೂ ಸಂಬಂಧಿಕರು ಸೋಮವಾರ ಮಧ್ಯಾಹ್ನ 12.30ರ ವೇಳೆಗೆ ಮಂಗಳೂರಿನ ಎಸ್ಐಟಿ ಕಚೇರಿಗೆ ಆಗಮಿಸಿದರು.

ಸೌಜನ್ಯಾ ಅವರ ತಾಯಿ ಕುಸುಮಾವತಿ, ಮಾವಂದಿರಾದ ಪುರಂದರ ಗೌಡ, ವಿಠಲ ಗೌಡ ಹಾಗೂ ಸಂಬಂಧಿಕರಾದ ಜಗದೀಶ್ ಗೌಡ, ಯಶೋಧಾ ಅವರು ಎಸ್ಐಟಿ ಕಚೇರಿಗೆ ಆಗಮಿಸಿದರು. ಇವರು ಇಂದು ಎಸ್ಐಟಿ ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಹಾಗೂ ಎಸ್ಐಟಿ ಅಧಿಕಾರಿಗಳಾದ ಸುಧೀರ್ ಕುಮಾರ್ ರೆಡ್ಡಿ ಮತ್ತು ನಿಶಾ ಜೇಮ್ಸ್ ಅವರ ಮುಂದೆ ವಿಚಾರಣೆ ಎದುರಿಸಲಿದ್ದಾರೆ.

Edited By :
PublicNext

PublicNext

02/11/2026 04:39 pm

Cinque Terre

21.17 K

Cinque Terre

1

ಸಂಬಂಧಿತ ಸುದ್ದಿ