ಕಟೀಲು : ಪುಸ್ತಕದ ಬದಲು ಮೊಬೈಲು ತೆಗೆದು ನೋಡುವುದರಿಂದ ಸಾಧನೆ ಮಾಡಲು ಸಾಧ್ಯವಾಗದ ಮನಸ್ಥಿತಿ ನಮ್ಮದಾಗುತ್ತಿದೆ. ಬದುಕಿನಲ್ಲಿ ಆಳವಾದ ಸತತವಾದ ಶ್ರಮದಿಂದ ಕಾಯಕವೇ ಕೈಲಾಸ ಎಂಬ ಮನೋಭಾವದಿಂದ ಸಾಧನೆ ಮಾಡಿರುವವರು ನಿಜವಾದ ಸಾಧಕರು, ಸಿನಿಮಾ ಹೀರೋಗಳು ಅಲ್ಲ. ಟ್ಯೂಬ್‌ಲೈಟ್‌ನಂತೆ ಎಲ್ಲರಿಗೂ ಬೆಳಕಾಗಬೇಕು. ಸಾಧನೆಗಳಾದಾಗ ಸಂಭ್ರಮಿಸಲು ನಮ್ಮವರೂ ಇರಬೇಕು. ಅಂತಹ ಯಶಸ್ಸು ನಮ್ಮದಾಗಬೇಕು ಎಂದು ಬಹುಭಾಷಾ ನಟ ಪೃಥ್ವಿ ಅಂಬರ್ ಹೇಳಿದರು.
ಕಟೀಲು ನುಡಿಹಬ್ಬದಲ್ಲಿ ಜನಸಾಮಾನ್ಯ ಸಾಧಕರು ಗೋಷ್ಟಿಯಲ್ಲಿ ಅವರು ಮಾತನಾಡಿದರು.
ಸಮ್ಮೇಳನಾಧ್ಯಕ್ಷ ಬಿ. ಜನಾರ್ದನ ಭಟ್ ಮಾತನಾಡಿ, ಸಾಧನೆಯೊಂದಿಗೆ ಬದುಕುವುದು ಹೇಗೆ ತೋರಿಸಿಕೊಟ್ಟ ಸಾಧಕರು ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದರು.
ಹೋರಾಟಗಾರ, ಸಮಾಜ ಸೇವಕ ನಿತ್ಯಾನಂದ ಒಳಕಾಡು, ಜ್ಯೂಸ್ ಅಂಗಡಿಯಲ್ಲಿ ಗ್ರಂತಾಲಯ ಮಾಡಿರುವ ಸುರೇಂದ್ರ ಕೋಟ್ಯಾನ್, ಕಬ್ಬು ಭತ್ತ ಹೀಗೆ ಸಮಗ್ರ ಕೃಷಿ ಸಾಧಕ ಕೆದೂರು ಶಾನಾಡಿ ರಾಮಚಂದ್ರ ಭಟ್, ಮಣ್ಣಿನ ಉತ್ಪನ್ನಗಳಿಗೆ ಆಧುನಿಕ ಸ್ಪರ್ಶ ನೀಡಿ ಉದ್ಯಮ ಬೆಳೆಸಿರುವ ರಘುರಾಮ ಕುಲಾಲ್ ಆಲೂರು ತಮ್ಮ ಸಾಧನೆಯ ಕುರಿತು ಪ್ರೇರಣೆಯ ಮಾತುಗಳನ್ನಾಡಿದರು.
ಶಂಕರನಾರಾಯಣ ನಾಯಕ್, ಗಾಯತ್ರೀ ಎನ್. ಆರ್, ಸುದೀಪ್ ಆರ್. ಅಮೀನ್, ಶರಣ್ ಬಂಗೇರ ಉಪಸ್ಥಿತರಿದ್ದರು.
Kshetra Samachara
02/11/2026 09:06 pm
LOADING...