ಪುತ್ತೂರು : ಕುಂಬ್ರ ಸಮೀಪದ ಕುಯ್ಯಾರಿನಲ್ಲಿ ಮನೆಮಂದಿ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಕಿಟಕಿಯ ಸರಳುಗಳನ್ನು ಮುರಿದು ಒಳನುಗ್ಗಿದ್ದ ಕಳ್ಳರು ಚಿನ್ನಾಭರಣ ಹಾಗೂ ನಗದು ಕದ್ದ ಘಟನೆ ನ. 1ರ ರಾತ್ರಿ ಸಂಭವಿಸಿದೆ.
ಕುಯ್ಯಾರು ನಿವಾಸಿ ಬಶೀರ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.ನ. 1ರ ರಾತ್ರಿ ಅವರು ಪತ್ನಿ ಹಾಗೂ ಮಕ್ಕಳೊಂದಿಗೆ ಸಾರಪುಣಿಗೆ ಧಾರ್ಮಿಕ ಮತಪ್ರಭಾಷಣಕ್ಕಾಗಿ ತೆರಳಿದ್ದು, ಕಾರ್ಯಕ್ರಮ ಮುಗಿಸಿ ಮನೆಗೆ ಬಂದಾಗ ಮನೆಯ ಹಿಂದಿನ ಬಾಗಿಲು ತೆರಿದಿತ್ತು. ಪರಿಶೀಲಿಸಿದಾಗ ಕಿಟಕಿಯ ಸರಳುಗಳನ್ನು ಮುರಿದಿರುವುದು ಕಂಡುಬಂತು. ಮನೆಯ ಕೋಣೆಯನ್ನು ಪರಿಶೀಲಿಸಿದಾಗ ಕಪಾಟು ತೆರೆದಿದ್ದು ಅದರೊಳಗಿದ್ದ ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಅಲ್ಲಿದ್ದ 5 ಪವನ್ ತೂಕದ ಚಿನ್ನಾಭರಣ, 0.650 ಗ್ರಾಂ.ನ ಡೈಮಂಡ್ ರಿಂಗ್ ಹಾಗೂ 25 ಸಾವಿರ ರೂ. ನಗದು ಕಳ್ಳತನ ಮಾಡಿರುವುದು ಕಂಡುಬಂದಿದೆ.
ಮನೆಯ ಇನ್ನೊಂದು ಕೋಣೆಯಲ್ಲಿದ್ದಕಪಾಟನ್ನು ಕೂಡ ಕಳ್ಳರು ಜಾಲಾಡಿದ್ದರೂ ಅದರಲ್ಲಿ ಅವರಿಗೆ ಯಾವುದೇ ಬೇಕಾದ ವಸ್ತುಗಳು ಸಿಕ್ಕಿಲ್ಲ. ಕಳ್ಳರು ಬಳಿಕ ಹಿಂದಿನ ಬಾಗಿಲು ತೆರೆದು ಪರಾರಿಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಘಟನೆ ಕುರಿತು ಬಶೀರ್ ಅವರು ಪುತ್ತೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
PublicNext
04/11/2026 12:46 pm
LOADING...