ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀಗ ಒಡೆದು 2.35 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಕಳ್ಳತನ

​ಶಿವಮೊಗ್ಗ : ನಗರದ ಗೋಪಿಶೆಟ್ಟಿಕೊಪ್ಪ ಸಮೀಪದ ಚಾಲುಕ್ಯನಗರ ಮುಖ್ಯರಸ್ತೆಯಲ್ಲಿರುವ ವಿಜಯಕುಮಾರ್ ಎಸ್.ಆರ್.ಎಂಬುವವರ ಮನೆಯ ಬೀಗ ಮುರಿದು 2.35 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಹಾಗೂ ನಗದು ದೋಚಿರುವ ಘಟನೆ ನಡೆದಿದೆ.

​ವಿಜಯಕುಮಾರ್ ಅವರು ಪತ್ನಿ ಮತ್ತು ತಾಯಿಯೊಂದಿಗೆ ಚಿತ್ರದುರ್ಗದ ದೇವಾಲಯಕ್ಕೆ ತೆರಳಿದ್ದರು. ಅವರ ಮಗಳು ಕಾಲೇಜಿಗೆ ಹೋಗಿದ್ದಳು. ಸಂಜೆ ಮಗಳು ಕಾಲೇಜಿನಿಂದ ವಾಪಸ್ ಮನೆಗೆ ಬಂದಾಗ ಬಾಗಿಲ ಬೀಗ ಒಡೆದಿರುವುದು ಕಂಡುಬಂದಿದೆ. ಆಕೆ ತಕ್ಷಣ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

​ವಿಜಯಕುಮಾರ್ ಅವರು ಮನೆಗೆ ಹಿಂತಿರುಗಿ ಪರಿಶೀಲಿಸಿದಾಗ, ಕೊಠಡಿಯಲ್ಲಿದ್ದ ಬೀರುಗಳನ್ನು ಆಯುಧದಿಂದ ಮೀಟಿ ತೆಗೆದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಬೀರಿನಲ್ಲಿದ್ದ 15.5 ಗ್ರಾಂ ತೂಕದ ಚಿನ್ನದ ಜುಮುಕಿ, 2 ಚೈನ್‌ಗಳು, ದೇವರ ಮನೆ ಹಾಗೂ ಬೀರುಗಳಲ್ಲಿದ್ದ 500 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು ಮತ್ತು 10,000 ನಗದು ಕಳುವಾಗಿದೆ. ಕಳುವಾದ ಸ್ವತ್ತುಗಳ ಒಟ್ಟು ಮೌಲ್ಯ 2,35,000 ಎಂದು ಅಂದಾಜಿಸಲಾಗಿದೆ.

​ಘಟನೆಗೆ ಸಂಬಂಧಿಸಿದಂತೆ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

04/11/2026 07:04 pm

Cinque Terre

340

Cinque Terre

0

ಸಂಬಂಧಿತ ಸುದ್ದಿ