", "articleSection": "Health & Fitness,Human Stories", "image": { "@type": "ImageObject", "url": "https://prod.cdn.publicnext.com/s3fs-public/229640-1750473623-yoga.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಪ್ರತಿದಿನ ಯೋಗಾಭ್ಯಾಸ ಮಾಡುವುದು ನಮ್ಮ ಆರೋಗ್ಯಕ್ಕೆ ಒಳ್ಳೆದು. ಯೋಗವು ಹಲವಾರು ರೋಗಗಳನ್ನು ನಮ್ಮತ್ತ ಸುಳಿಯದಂತೆ ನೋಡಿಕೊಳ್ಳುತ್ತದೆ. ...Read more" } ", "keywords": "Belagavi Arati Sankeshwari yoga achiever, human values award, yoga excellence, Karnataka's pride, inspirational story", "url": "https://dashboard.publicnext.com/node" } ಬೆಳಗಾವಿ: ಅಪ್ರತಿಮ ಯೋಗ ಸಾಧಕಿ ಆರತಿ ಸಂಕೇಶ್ವರಿ- ಮಾನವತೆ ಗುಣ ಸಂಪನ್ನೆಗೆ ಪ್ರಶಸ್ತಿ ಸರಮಾಲೆ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಅಪ್ರತಿಮ ಯೋಗ ಸಾಧಕಿ ಆರತಿ ಸಂಕೇಶ್ವರಿ- ಮಾನವತೆ ಗುಣ ಸಂಪನ್ನೆಗೆ ಪ್ರಶಸ್ತಿ ಸರಮಾಲೆ!

ಬೆಳಗಾವಿ: ಪ್ರತಿದಿನ ಯೋಗಾಭ್ಯಾಸ ಮಾಡುವುದು ನಮ್ಮ ಆರೋಗ್ಯಕ್ಕೆ ಒಳ್ಳೆದು. ಯೋಗವು ಹಲವಾರು ರೋಗಗಳನ್ನು ನಮ್ಮತ್ತ ಸುಳಿಯದಂತೆ ನೋಡಿಕೊಳ್ಳುತ್ತದೆ. ದೇಹ ಮತ್ತು ಮನಸ್ಸನ್ನು ಒಟ್ಟಿಗೆ ತರುತ್ತದೆ ಮತ್ತು ಮೂರು ಮುಖ್ಯ ಅಂಶಗಳ ಮೇಲೆ ಯೋಗವನ್ನು ನಿರ್ಮಿಸಲಾಗಿದೆ. ಚಲನೆ, ಉಸಿರಾಟ ಮತ್ತು ಧ್ಯಾನ. ಯೋಗವು ಸುಧಾರಿತ ಭಂಗಿ, ನಮ್ಯತೆ, ಶಕ್ತಿ, ಸಮತೋಲನ ಮತ್ತು ದೇಹದ ಅರಿವು ಸೇರಿದಂತೆ ಅನೇಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಇವರ ಹೆಸರು ಆರತಿ ಸಂಕೇಶ್ವರಿ. ಯೋಗದಲ್ಲಿ ಅಪಾರ ಪರಿಣತಿ ಹೊಂದಿದ್ದಾರೆ. ಜಲಯೋಗ ಸೇರಿದಂತೆ ಅನೇಕ ರೀತಿಯ ಯೋಗದಲ್ಲಿ ಅಪಾರ ಜ್ಞಾನ ಸಂಪನ್ನರು.‌ ಸುಮಾರು 20 ವರ್ಷದಿಂದ ಯೋಗ ತರಬೇತಿ ನೀಡುತ್ತಾ ಬಂದಿರುವ ಇವರು, ಡಯಾಬಿಟಿಕ್ ಸೆಂಟರ್ ನಲ್ಲಿ ಯೋಗ ಥೆರಫಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.‌

ಗರ್ಭಿಣಿಯರು, ಮಾನಸಿಕ ರೋಗಿಗಳು, ಶುಗರ್, ಬಿಪಿ ಇದ್ದವರು, ಎಲುಬು ನೋವು, ಬೊಜ್ಜುತನ, ಅಸ್ತಮಾ, ಸೊಂಟ ನೋವು, ಪಿಸಿಒಡಿ ಸಮಸ್ಯೆ ಇದ್ದವರಿಗೆ ಉಚಿತವಾಗಿ ಯೋಗ ತರಬೇತಿ ನೀಡುತ್ತಿದ್ದಾರೆ. ಇವರಿಗೆ ಯೋಗದಲ್ಲಿ ಅನೇಕ ಪ್ರಶಸ್ತಿಗಳೂ ಲಭಿಸಿವೆ. 2012ರಲ್ಲಿ ಸಿಂಗಾಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 2015ರಲ್ಲಿ ದೆಹಲಿಯಲ್ಲಿ ನಡೆದ ಹಿಮಾಲಯ ಯೋಗ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ, ಪಂಜಾಬ್ ನಲ್ಲಿ ನಡೆದ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಮೂರನೇ ಸ್ಥಾನ, ಕರ್ನಾಟಕದಲ್ಲಿ ಅಮೆಚೂರು ಯೋಗ ಸಂಸ್ಥೆ ನಡೆಸಿದ ಸ್ಪರ್ಧೆಯಲ್ಲಿ 2004- 2008ರ ವರೆಗೆ ಸತತ ಐದು ವರ್ಷ ಪ್ರಥಮ ಸ್ಥಾನ ಹಾಗೂ 2018ರಲ್ಲಿ ನಡೆದ ಹಿಮಾಲಯ ಯೋಗ ಓಲ್ಮಪಿಯಾರ್ಡ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.‌

ಬೆಳಗಾವಿಯ ಆಯುಷ್ ಇಲಾಖೆ ನಡೆಸುವ ಜಿಲ್ಲಾ ಮಟ್ಟದ ಎಲ್ಲಾ ಹೆಲ್ತ್ ಕೇರ್ ಕ್ಯಾಂಪ್ ಗಳಲ್ಲಿ ಉಚಿತ ಯೋಗ ತರಬೇತಿ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚು ಕ್ಯಾಂಪ್ ಗಳಲ್ಲಿ ಭಾಗಿಯಾಗಿದ್ದಾರೆ. 2023ರಲ್ಲಿ ಯೋಗಥಾನ್ ವಲ್ಡ್ ರೆಕಾರ್ಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಉಚಿತವಾಗಿ ಐದು ಸಾವಿರ ಜನರಿಗೆ ಯೋಗಾಭ್ಯಾಸ ಕಲಿಸಿದ್ದಾರೆ. ಈ ವರ್ಷವೂ ಬೆಳಗಾವಿ ಜಿಲ್ಲಾಡಳಿತ ನಡೆಸುವ ಯೋಗ ದಿನಾಚರಣೆಯ ನೇತೃತ್ವವನ್ನು ಅರತಿ ಸಂಕೇಶ್ವರಿ ವಹಿಸಿಕೊಳ್ಳಲಿದ್ದಾರೆ.

ಒಟ್ಟಿನಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಯೋಗ ಸಹಾಯಕ. ಯೋಗವನ್ನು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಿದರೆ ಒಟ್ಟಾರೆ ಆರೋಗ್ಯದ ಮೇಲೆ ಅತ್ಯುತ್ತಮ ಪರಿಣಾಮ ಬೀರುತ್ತದೆ.

-ಪ್ರಲ್ಹಾದ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ

Edited By : Manjunath H D
PublicNext

PublicNext

21/06/2025 08:10 am

Cinque Terre

25.67 K

Cinque Terre

0

ಸಂಬಂಧಿತ ಸುದ್ದಿ