ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಅಮಾವಾಸ್ಯೆ ನಿಮಿತ್ತ ಮಣ್ಣೆತ್ತಿನ ಮಾರಾಟ ಜೋರು !

ಹುಬ್ಬಳ್ಳಿ : ರೈತಾಪಿ ಜನರ ಸಡಗರದ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಒಂದಕ್ಕೊಂದು ವಿಭಿನ್ನವಾದ ಅಂದ ಚೆಂದದ ಮಣ್ಣಿನ ಜೋಡೆತ್ತುಗಳು ಮಾರಾಟ ಜೋರಾಗಿದೆ.

ನಾಳೆ ನಡೆಯಲಿರುವ ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಹುಬ್ಬಳ್ಳಿ ಮಾರುಕಟ್ಟೆಗೆ ಮಣ್ಣಿನಲ್ಲಿ ತಯಾರಾದ ಬಣ್ಣ ಬಣ್ಣದ ಜೋಡೆತ್ತುಗಳು ಲಗ್ಗೆ ಇಟ್ಟಿದ್ದು ಮಾರಾಟ ಖರೀದಿ ಅಬ್ಬರ ನಡೆದಿದೆ.

ಮಣ್ಣಿನ ಆಕೃತಿ ಅಳತೆಯ ಮೇಲೆ ಕನಿಷ್ಠ 50 ರೂಪಾಯಿಯಿಂದ 80 ರೂಪಾಯಿವರೆಗೆ ಮಣ್ಣಿನ ಬಸವಣ್ಣನ ಮಾರಾಟ ನಡೆದಿದೆ, ವಿಶೇಷವಾಗಿ ನಗರ ಪ್ರದೇಶದ ಜನರು ಮಣ್ಣಿನ ಬಸವಣ್ಣನನ್ನು ಖರೀದಿಸಿ ಪೂಜೆಗಾಗಿ ಕೊಂಡಯ್ಯುವ ದೃಶ್ಯಗಳು ಕಂಡು ಬಂದವು.

ವಿಶೇಷವಾಗಿ ರೈತಾಪಿ ಜನರ ಕಾಯಕಕ್ಕೆ ವರವಾದ ಎತ್ತುಗಳನ್ನು ಮಣ್ಣಿನ ಆಕೃತಿಯಲ್ಲಿ ಜಗುಲಿ ಮೇಲೆ ಇಟ್ಟು ಪೂಜಿಸುವ ಮಣ್ಣೇತ್ತಿನ ಅಮಾವಾಸ್ಯೆ ಎಲ್ಲೇಡೆ ಆಚರಣೆಯಲ್ಲಿದೆ.

Edited By : Manjunath H D
Kshetra Samachara

Kshetra Samachara

24/06/2025 03:46 pm

Cinque Terre

10.63 K

Cinque Terre

0

ಸಂಬಂಧಿತ ಸುದ್ದಿ