ಹುಬ್ಬಳ್ಳಿ: ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಅವರು ಸಾಮಾಜಿಕ ಕಳಕಳಿಯುಳ್ಳ, ಯುವಪಡೆ ಪುಸ್ತಕದ ಮೇಲೆ ಆಸಕ್ತಿ ತೋರಲೆಂದು ಬದುಕಿನ ಅಂತರಂಗದ ಅನಾವರಣ "ಬೊಗಸೆ ನೀರು" ಎಂಬ ಕೃತಿಯನ್ನು ಬರೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ.
ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ, ಸಂಯುತಾ ಪ್ರತಿಷ್ಠಾನ, ಕನ್ನಡ ಧ್ವನಿ ಟ್ರಸ್ಟ್, ಹು-ಧಾ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಸಂಯುಕ್ತಾಶ್ರಯದಲ್ಲಿ, ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಅವರು ಬದುಕಿನ ಅಂತರಂಗದ ಅನಾವರಣ "ಬೊಗಸೆ ನೀರು" ಕೃತಿಯನ್ನು ಸಭಾಪತಿ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಿದರು.
ಪುಸ್ತಕವನ್ನು ಸಾಕಷ್ಟು ಜನ ಬರೆಯುತ್ತಾರೆ. ಆದ್ರೆ, ಇಂದು ಪುಸ್ತಕ ಓದುವವರು ಕಡಿಮೆಯಾಗಿದ್ದಾರೆ. ಪತ್ರಕರ್ತನಾಗಿ ಪುಸ್ತಕ ಬರೆಯುವುದು ದೊಡ್ಡ ಸಾಹಸವೇ ಆಗಿದೆ. ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಅವರು ನಾಡಿಗೆ ಉತ್ತಮ ಪುಸ್ತಕ ಕೊಟ್ಟಿದ್ದಾರೆ. ಹಬ್ಬು ಪುಸ್ತಕದಲ್ಲಿ ಮಕ್ಕಳಿಗೆ, ಸಮಾಜಕ್ಕೆ ಮಾರ್ಗದರ್ಶನವಿದೆ. ಯುವ ಸಮುದಾಯ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಅಷ್ಟೇ ಅಲ್ದೆ, ಹಲವಾರು ಸಾಮಾಜಿಕ ಚಿಂತಕರು, ಗಣ್ಯರು ಹಬ್ಬು ಅವರ ಬೊಗಸೆ ನೀರು ಕೃತಿ ಬಗ್ಗೆ ಶುಭ ನುಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಪತ್ರಕರ್ತೆ ಆರ್. ಪೂರ್ಣಿಮಾ, ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ, ಕೃತಿಕಾರ ಪತ್ರಕರ್ತ, ಹುಬ್ಬಳ್ಳಿ ಧಾರವಾಡ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ವಿ.ಎಂ. ಭಟ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು, ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/06/2025 10:08 pm