ಭಟ್ಕಳ: ಭಟ್ಕಳ ತಾಲೂಕಿನ ಸಬ್ಬತ್ತಿ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಕೋಳಿ ಅಂಕ (ಹುಂಜ ಜೂಜಾಟ)ದ ಮೇಲೆ ಗ್ರಾಮೀಣ ಠಾಣೆಯ ಪೊಲೀಸ್ ತಂಡ ತೀವ್ರ ದಾಳಿ ನಡೆಸಿದ್ದು,ಮೂರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಏಳು ಮಂದಿ ಪರಾರಿಯಾಗಿದ್ದಾರೆ. ದಾಳಿಯಲ್ಲಿ ಸುಮಾರು ₹3.56,470 ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಎ ಲಿಂಗಾರೆಡ್ಡಿ ನೇತೃತ್ವದ ತಂಡ ಈ ದಾಳಿ ನಡೆಸಿ ಆರೋಪಿತರು ಭಟ್ಕಳ ತಾಲೂಕಿನ ಹಡಿಲ್ ಸಬ್ಬತ್ತಿ ಅರಣ್ಯದಲ್ಲಿ ತಮ್ಮ ಲಾಭಕ್ಕೋಸ್ಕರ ಹುಂಜಗಳ ಕಾಲುಗಳಿಗೆ ಕತ್ತಿ ಕಟ್ಟಿ ಕಾದಾಟಕ್ಕೆ ಬಿಟ್ಟು ಅದರ ಮೇಲೆ ಹಣವನ್ನು ಪಂಥ ಕಟ್ಟಿ ಕೋಳಿ ಅಂಕ ಜೂಗಾರಾಟ ಆಡುತ್ತಿದ್ದರು.
ಭಟ್ಕಳ ತಾಲೂಕಿನವರಾದ ಸಬ್ಬತ್ತಿಯ ನಾಗರಾಜ, ಬೇಂಗ್ರೆ ಸಾರದಹೊಳೆಯ ಜಗದೀಶ ಮಾಸ್ತಿ ನಾಯ್ಕ (30), ಹಡೀಲ್ ನಿವಾಸಿ ಶಶಿಕಾಂತ ತಂದೆ ನಾಗೇಶ ನಾಯ್ಕ (26), ಸಬ್ಬತ್ತಿಯ ನಾರಾಯಣ ಕುಪ್ಪಯ್ಯ ನಾಯ್ಕ (35), ತಲಾಂದ ನಿವಾಸಿ ಗಣಪತಿ ವಿಠಲ,ಮುಟ್ಟಳ್ಳಿ ನಿವಾಸಿಗಳಾದ ಧನು ಮತ್ತು ಪ್ರದೀಪ, ಶಿರೂರು ನಿವಾಸಿಗಳಾದ ಸಂತೋಷ ಮತ್ತು ಸುಪ್ರೀತ ಹಾಗೂ ಬೈಂದೂರಿನ ರಾಜು ವಿರುದ್ಧ ಪ್ರಕರಣ ದಾಖಲಾಗಿದೆ.
ಕಾರ್ಯಚರಣೆಯಲ್ಲಿ ಪಿಎಸ್‌ಐ ಭರಮಪ್ಪ ಬೆಳಗಲಿ, ಎಎಸ್‌ಐ ರಾಜೇಶ ಕೊರ್ಗ, ನಿಂಗನಗೌಡ ಪಾಟೀಲ್, ಮಂಜುನಾಥ ಖಾರ್ವಿ, ಈರಣ್ಣ ಪೂಜಾರಿ, ಅಕ್ಷತ ಅವಜಿ ಮುಂತಾದವರು ಇದ್ದರು.
Kshetra Samachara
29/06/2025 05:49 pm