", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/405356-1751211822-hooo.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಒಂದಲ್ಲ ಒಂದು ರೀತಿಯಲ್ಲಿ ವಿನೂತನ ಅಭಿಯಾನ ಮಾಡುತ್ತ ಬಂದಿದೆ. ಈಗ ಕಸ ವಿಲೇವಾರಿಗಾಗಿ ಒಂದು ...Read more" } ", "keywords": "Hubballi, cleanliness drive, report waste, clean city initiative, Karnataka cleanliness. ", "url": "https://dashboard.publicnext.com/node" }
ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಒಂದಲ್ಲ ಒಂದು ರೀತಿಯಲ್ಲಿ ವಿನೂತನ ಅಭಿಯಾನ ಮಾಡುತ್ತ ಬಂದಿದೆ. ಈಗ ಕಸ ವಿಲೇವಾರಿಗಾಗಿ ಒಂದು ಒಂದು ವಾಟ್ಸಪ್ ನಂಬರ್ ಮಾಡಿದ್ದು, ಅವಳಿ ನಗರದಲ್ಲಿ ಎಲ್ಲೆಂದರಲ್ಲಿ ಕಸ ಕಂಡ್ರೆ ಸಾಕು, ಯಾರು ಬೇಕಾದ್ರೂ 8277803778 ಈ ನಂಬರಗೆ ಒಂದು ಪೋಟೋ ಹಾಕಿ ಲೊಕೇಶನ್ ಹಾಕಿದ್ರೆ ಸಾಕು, 24 ಗಂಟೆ ಒಳಗೆ ಕಸ ವಿಲೇವಾರಿ ಮಾಡಲು ಸಿದ್ದತೆ ಮಾಡಿಕೊಂಡಿದೆ.
ಹುಬ್ಬಳ್ಳಿ - ಧಾರವಾಡ ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಕಸ ಚೆಲ್ಲುತ್ತಿದ್ದರು. ಈ ಕಸದ ಸಮಸ್ಯೆ ಪರಿಹಾರಕ್ಕೆ ಮಹಾನಗರ ಪಾಲಿಕೆ ಟೊಂಕ ಕಟ್ಟಿ ನಿಂತಿದೆ. ಕಸ ಚೆಲ್ಲುವ ಜಾಗಗಳನ್ನ ಗುರುತಿಸಿ ಅವುಗಳಲ್ಲಿ ಒಟ್ಟು 391 ಕಸ ಚೆಲ್ಲುವ ಜಾಗವನ್ನು ಬ್ಲಾಕ್ ಸ್ಪಾಟ್ಗಳನ್ನಾಗಿ ಮಾಡಿ, ಅಲ್ಲಿ ಸಂಪೂರ್ಣವಾಗಿ ಕಸ ವಿಲೇವಾರಿ ಮಾಡಿ ಆ ಜಾಗಗಳನ್ನ ಶುಚಿಗೊಳಿಸಿ, ಶೃಂಗಾರಗೊಳಿಸುತ್ತಿದೆ. ಇನ್ನು ಅಧಿಕಾರಿಗಳು ಹಾಗೂ ಪೌರಕಾರ್ಮಿಕರ ನಿರಂತರ ಶ್ರಮದಿಂದ ಇಲ್ಲಿಯವರೆಗೂ 231 ವಿವಿಧ ವಲಯಗಳ ವಾರ್ಡ್‌ಗಳಲ್ಲಿ 74 ಬ್ಲಾಕ್ ಸ್ಪಾಟ್ಗಳನ್ನ ಶುಚಿಗೊಳಿಸಲಾಗಿದೆ. ಬ್ಲಾಕ್ ಸ್ಟಾಟ್ಗಳನ್ನ ಶುಚಿಗೊಳಿಸುವ ಈ ಕಾರ್ಯ ತ್ವರಿತ ಗತಿಯಲ್ಲಿ ಸಾಗುತ್ತಿದೆ.
ಸದ್ಯ ಕಸ ಕಂಡಲ್ಲಿ ಫೋಟೋ ಕಳ್ಸಿ ಅನ್ನುವ ವಿನೂತನ ಅಭಿಯಾನವನ್ನು ಪಾಲಿಕೆ ಆರಂಭ ಮಾಡಿದೆ. ಸಾರ್ವಜನಿಕರು ಕಸದ ರಾಶಿ ಬಿದ್ದಿರೋದು ಕಂಡರೆ ಕಸವಿರುವ ಜಾಗದ ಫೋಟೋ ಮತ್ತು ಲೋಕೆಷನ್ ಅನ್ನು ಪಾಲಿಕೆಯ ಸಹಾಯವಾಣಿ 8277803778 ನಂಬರ್ಗೆ ಕಳುಹಿಸಿದ್ರೆ ಸಾಕು 24 ಗಂಟೆಯೊಳಗೆ ಕಸ ವಿಲೇವಾರಿ ಮಾಡಲಾಗುವುದು ಅಂತ ಆಯುಕ್ತರಾದ ರುದ್ರೇಶ್ ಘಾಳಿ ಅವರು ಹೇಳಿದ್ದಾರೆ.
ಪೌರಕಾರ್ಮಿಕರು ಮತ್ತು ಅಧಿಕಾರಿಗಳ ಸತತ ಪ್ರಯತ್ನದಿಂದ ಸ್ವಚ್ಚವಾದ ಬ್ಲಾಕ್ ಸ್ಪಾಟ್ಗಳಲ್ಲಿ ನಾಗರಿಕರು ಮತ್ತೆ ಕಸ ಚೆಲ್ಲುತ್ತಿದ್ದಾರೆ. ಸ್ವಚ್ಚವಾದ ಜಾಗದಲ್ಲಿ ಇನ್ಮುಂದೆ ಯಾರೂ ಕಸ ಚೆಲ್ಲಬಾರದೆಂದು ಪಾಲಿಕೆ ಅಧಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/06/2025 09:13 pm