", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/463655-1753783801-manjunath-(92).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ: ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರು ಪಾಕಿಸ್ತಾನದವರು ಎಂಬುದಕ್ಕೆ ಪುರಾವೆಯೇನು? ದೇಶೀಯ ಉಗ್ರರಾಗಿರಲಾರೆಯೆ? ಎಂಬ ಕಾಂಗ್ರೆಸ್‌...Read more" } ", "keywords": "Amit Shah, Chidambaram, Pakistan, terrorists, encounter ", "url": "https://dashboard.publicnext.com/node" } ಉಗ್ರರ ಬಳಿ ಪಾಕ್ ವಸ್ತುಗಳು ಪತ್ತೆ: ಚಿದಂಬರಂಗೆ ಅಮಿತ್ ಶಾ ಖಡಕ್ ಉತ್ತರ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಗ್ರರ ಬಳಿ ಪಾಕ್ ವಸ್ತುಗಳು ಪತ್ತೆ: ಚಿದಂಬರಂಗೆ ಅಮಿತ್ ಶಾ ಖಡಕ್ ಉತ್ತರ

ನವದೆಹಲಿ: ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರು ಪಾಕಿಸ್ತಾನದವರು ಎಂಬುದಕ್ಕೆ ಪುರಾವೆಯೇನು? ದೇಶೀಯ ಉಗ್ರರಾಗಿರಲಾರೆಯೆ? ಎಂಬ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಪ್ರಶ್ನೆಗೆ ಉತ್ತರಿಸಿದ ಶಾ, "ಮೂವರು ಪಾಕಿಸ್ತಾನಿಗಳೆಂಬುದಕ್ಕೆ ಸ್ಪಷ್ಟ ಪುರಾವೆಗಳಿವೆ. ಇಬ್ಬರ ಬಳಿ ಪಾಕಿಸ್ತಾನದ ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಸಿಕ್ಕಿದೆ. ಅವರ ಬಳಿ ಪಾಕಿಸ್ತಾನದಲ್ಲಿ ತಯಾರಾದ ಚಾಕೊಲೇಟ್‌ಗಳು ಸಹ ಸಿಕ್ಕಿವೆ," ಎಂದು ವಿವರಿಸಿದರು.

"ಮಾಜಿ ಗೃಹ ಸಚಿವರಾದ ಚಿದಂಬರಂ ಅವರು ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡುವ ಮಾತು ಕೇಳಿದಾಗ ನೋವಾಯಿತು. ಪಾಕಿಸ್ತಾನವನ್ನು ರಕ್ಷಿಸುವ ಮೂಲಕ ಅವರು ಏನು ಗಳಿಸುತ್ತಾರೆ? ಈ ದೇಶದ ಮಾಜಿ ಗೃಹ ಸಚಿವರು ಪಾಕಿಸ್ತಾನ ಪರ ಮಾತು ಆಡುತ್ತಿರುವುದು ವಿಶ್ವದ ಮುಂದೆ ವಿಪರ್ಯಾಸವಾಗಿದೆ," ಎಂದು ಶಾ ಆಕ್ರೋಶ ವ್ಯಕ್ತಪಡಿಸಿದರು.

ಅಮಿತ್ ಶಾ ಮತ್ತಷ್ಟು ಮಾಹಿತಿ ನೀಡುತ್ತಾ, "ಭಾರತವು 'ಆಪರೇಷನ್ ಸಿಂಧೂರ್' ಮೂಲಕ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಯಶಸ್ವಿಯಾಗಿ ನಾಶಪಡಿಸಿದೆ. ಪಹಲ್ಗಾಮ್‌ನ 26 ನಾಗರಿಕರ ಹತ್ಯೆಗೆ ಪ್ರತೀಕಾರವಾಗಿ ಭಾರತೀಯ ಭದ್ರತಾ ಪಡೆಗಳು ನಿಖರವಾದ ದಾಳಿಗಳನ್ನು ನಡೆಸಿ ಹಲವಾರು ಉಗ್ರರನ್ನು ಹೊಡೆದುರುಳಿಸಿದ್ದವು," ಎಂದು ಸ್ಪಷ್ಟಪಡಿಸಿದರು.

Edited By :
PublicNext

PublicNext

29/07/2025 03:49 pm

Cinque Terre

32.52 K

Cinque Terre

0

ಸಂಬಂಧಿತ ಸುದ್ದಿ