ಬೆಂಗಳೂರು: ಕೊಲೆ ಯತ್ನ ಆರೋಪದಲ್ಲಿ ರೌಡಿ ಶೀಟರ್‌ಗಳಾದ ಯಶಸ್ವಿನಿ, ಬೇಕರಿ ರಘು ವಿರುದ್ಧ ನಟ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ದೂರು ನೀಡಿದ್ದಾರೆ.
ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ದು ಜೈಲಿನ ಬ್ಯಾರಕ್‌ನಲ್ಲಿ ನಟ ದರ್ಶನ್ ಇರುವ ಫೋಟೋ ತೋರಿಸಿ ನಮ್ಮ ದರ್ಶನ್ ವಿರುದ್ಧನೇ ಮಾತಾಡ್ತಿಯಾ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೇ ಡ್ರ್ಯಾಗರ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲಿಂದ ತಾವು ತಪ್ಪಿಸಿಕೊಂಡು ಬಂದಿದ್ದೇ ಹೆಚ್ಚು ಎಂದು ಬಿಗ್‌ಬಾಸ್ ಪ್ರಥಮ್ ದೂರಿನಲ್ಲಿ ತಿಳಿಸಿದ್ದಾರೆ. ಬೆಂಗಳೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿರುವ ಯಶಸ್ವಿನಿ ಕೂಡ ರೌಡಿ ಶೀಟರ್ ಆಗಿದ್ದು ರೌಡಿ ಶೀಟರ್ ದಡಿಯಾ ಮಹೇಶನ ಪತ್ನಿಯಾಗಿದ್ದಾಳೆ.
PublicNext
29/07/2025 06:01 pm