", "articleSection": "Crime,Viral", "image": { "@type": "ImageObject", "url": "https://prod.cdn.publicnext.com/s3fs-public/463655-1753801649-WhatsApp-Image-2025-07-29-at-7.23.11-PM-(1).jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹರಿಯಾಣ: ವಲಸೆ ಕಾರ್ಮಿಕನೊಬ್ಬನನ್ನು ತಲೆಕೆಳಗಾಗಿ ನೇತುಹಾಕಿ ಅಮಾನುಷವಾಗಿ ಥಳಿಸಿದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದ್ದು, ಈ ದೃಶ್ಯ ಇದೀ...Read more" } ", "keywords": "Labourer assault, viral video, worker abuse, physical assault, labour rights, worker mistreatment. ", "url": "https://dashboard.publicnext.com/node" } ತಲೆಕೆಳಗಾಗಿ ನೇತುಹಾಕಿ ಕಾರ್ಮಿಕನಿಗೆ ಥಳಿತ : ವಿಡಿಯೋ ವೈರಲ್‌ - ನೆಟ್ಟಿಗರು ಕಿಡಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಲೆಕೆಳಗಾಗಿ ನೇತುಹಾಕಿ ಕಾರ್ಮಿಕನಿಗೆ ಥಳಿತ : ವಿಡಿಯೋ ವೈರಲ್‌ - ನೆಟ್ಟಿಗರು ಕಿಡಿ

ಹರಿಯಾಣ: ವಲಸೆ ಕಾರ್ಮಿಕನೊಬ್ಬನನ್ನು ತಲೆಕೆಳಗಾಗಿ ನೇತುಹಾಕಿ ಅಮಾನುಷವಾಗಿ ಥಳಿಸಿದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದ್ದು, ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕಿಡಿ ಕಾರಿದ್ದಾರೆ.

ಹಿಂಸೆಗೆ ಒಳಗಾದ ವ್ಯಕ್ತಿಯನ್ನ ಸ್ಥಳೀಯ ಗುತ್ತಿಗೆದಾರನೆಂದು ಗುರುತಿಸಲಾಗಿದೆ. ವೈರಲ್ ವೀಡಿಯೋದಲ್ಲಿ, ತಲೆಕೆಳಗಾಗಿ ನೇತುಹಾಕಲ್ಪಟ್ಟ ಕಾರ್ಮಿಕನು ಅಳುತ್ತಾ ಬಿಟ್ಟುಬಿಡುವಂತೆ ಕೋರುತ್ತಿರುವ ದೃಶ್ಯಗಳು ಕಂಡುಬರುತ್ತವೆ. ಗುತ್ತಿಗೆದಾರನು ಅವನಿಗೆ ಥಳಿಸುತ್ತಿದ್ದಾಗ, ಅಲ್ಲಿಯೇ ನಿಂತಿದ್ದ ಕೆಲವರು ತರ್ಕವಾಡುತ್ತಿರುವುದು ಕೂಡ ದೃಶ್ಯದಲ್ಲಿ ಸೆರೆಯಾಗಿದೆ.

ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಗಂಭೀರವಾಗಿ ಖಂಡಿಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಘಟನೆ ಜೂನ್ ತಿಂಗಳಲ್ಲಿ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಗುರುಗ್ರಾಮ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಘಟನೆ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇನ್ನುಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Edited By :
PublicNext

PublicNext

29/07/2025 08:37 pm

Cinque Terre

34.02 K

Cinque Terre

0

ಸಂಬಂಧಿತ ಸುದ್ದಿ