", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/52563-1753888443-WhatsApp-Image-2025-07-30-at-6.47.17-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಚೆನ್ನೈ : ಚೆನ್ನೈನ ಪೆರುಂಗುಡಿ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರ ಪಕ್ಕದಲ್ಲಿ ಬಂದು ಕುಳಿತುಕೊಳ್ಳುವ ವ್ಯಕ್ತಿ ಆಕೆಯ ಕತ್ತಿನಲ್ಲಿರುವ ಚಿನ್ನದ...Read more" } ", "keywords": "chain snatching incident, viral video, thief sitting next to woman, chain theft news, public place theft, women safety concerns, crime news India, viral crime videos, theft in crowded areas", "url": "https://dashboard.publicnext.com/node" }
ಚೆನ್ನೈ : ಚೆನ್ನೈನ ಪೆರುಂಗುಡಿ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರ ಪಕ್ಕದಲ್ಲಿ ಬಂದು ಕುಳಿತುಕೊಳ್ಳುವ ವ್ಯಕ್ತಿ ಆಕೆಯ ಕತ್ತಿನಲ್ಲಿರುವ ಚಿನ್ನದ ಸರ ಕಿತ್ತು ಎಸ್ಕೇಪ್ ಆಗಿದ್ದಾನೆ.
ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಈ ಸರ ಕಿತ್ತು ಎಸ್ಕೇಪ್ ಆದ ಆರೋಪದ ಮೇಲೆ 28 ವರ್ಷದ ಬಾಲಾಜಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆರೋಪಿಯನ್ನು ಸೌಂದರ್ ಎಂದೂ ಕರೆಯಲ್ಪಡುವ ಬಾಲಾಜಿ ಎಂದು ಗುರುತಿಸಲಾಗಿದೆ.
ಘಟನೆಯ ಸಿಸಿಟಿವಿ ದೃಶ್ಯದಲ್ಲಿ ಆರೋಪಿಯು ಮಹಿಳೆಯ ಬಳಿಗೆ ಬಂದು ರೈಲ್ವೆ ನಿಲ್ದಾಣದ ಬೆಂಚಿನ ಮೇಲೆ ಆಕೆಯ ಪಕ್ಕದಲ್ಲಿ ಕುಳಿತುಕೊಂಡಿರುವುದನ್ನು ಕಾಣಬಹುದು. ಕೆಲವು ನಿಮಿಷಗಳ ನಂತರ, ಇದ್ದಕ್ಕಿದ್ದಂತೆ ಮಹಿಳೆಯ ಸರ ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ವರದಿಯ ಪ್ರಕಾರ, ರೈಲ್ವೆ ನಿಲ್ದಾಣವು ಹೆಚ್ಚಾಗಿ ನಿರ್ಜನವಾಗಿದ್ದರಿಂದ, ಮಹಿಳೆ ಸಹಾಯಕ್ಕಾಗಿ ಕಿರುಚುತ್ತಿದ್ದರೂ ಯಾರೂ ರಕ್ಷಣೆಗೆ ಬರಲು ಸಾಧ್ಯವಾಗಿಲ್ಲ.
ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ, ಪೆರುಂಗುಡಿ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ ಬಳಿಕ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
PublicNext
30/07/2025 08:57 pm