", "articleSection": "Crime,Viral", "image": { "@type": "ImageObject", "url": "https://prod.cdn.publicnext.com/s3fs-public/52563-1753887790-WhatsApp-Image-2025-07-30-at-5.17.33-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಈ ಕಾಲದಲ್ಲಿ ಮಹಿಳೆಯರಷ್ಟೇ ಅಲ್ಲ, ಪುಟ್ಟ ಹೆಣ್ಣು ಮಕ್ಕಳಿಗೂ ಸಮಾಜದಲ್ಲಿ ಸುರಕ್ಷತೆಯಿಲ್ಲ ಎಂದೆನಿಸುತ್ತದೆ. ಇಂತಹದ್ದೊಂದು ಘಟನೆ ಪಾಕಿಸ್ತಾನದಲ್ಲ...Read more" } ", "keywords": "street harassment video viral, mid-road molestation incident, girl slapped on road, viral videos India, street harassment cases, public molestation news, road safety concerns", "url": "https://dashboard.publicnext.com/node" } ನಡು ರಸ್ತೆಯಲ್ಲಿಯೇ ಬಾಲಕಿಗೆ ಮುತ್ತಿಟ್ಟು ಕಿರಿಕುಳ ಕೊಟ್ಟು ಎಸ್ಕೇಪ್‌...ವಿಡಿಯೋ ವೈರಲ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಡು ರಸ್ತೆಯಲ್ಲಿಯೇ ಬಾಲಕಿಗೆ ಮುತ್ತಿಟ್ಟು ಕಿರಿಕುಳ ಕೊಟ್ಟು ಎಸ್ಕೇಪ್‌...ವಿಡಿಯೋ ವೈರಲ್

ಈ ಕಾಲದಲ್ಲಿ ಮಹಿಳೆಯರಷ್ಟೇ ಅಲ್ಲ, ಪುಟ್ಟ ಹೆಣ್ಣು ಮಕ್ಕಳಿಗೂ ಸಮಾಜದಲ್ಲಿ ಸುರಕ್ಷತೆಯಿಲ್ಲ ಎಂದೆನಿಸುತ್ತದೆ. ಇಂತಹದ್ದೊಂದು ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಕಾಮುಕನೊಬ್ಬ ನಡು ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಪುಟ್ಟ ಬಾಲಕಿಗೆ ಮುತ್ತಿಟ್ಟು ಕಿರುಕುಳ ನೀಡಿದ್ದಾನೆ. ಈ ಪಾಪಿಯ ದುಷ್ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ತನ್ನ ತಮ್ಮನೊಂದಿಗೆ ಪುಟ್ಟ ಬಾಲಕಿಯೊಬ್ಬಳು ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದ ವೇಳೆ, ಎದುರುಗಡೆಯಿಂದ ಬಂದ ವ್ಯಕ್ತಿ ಏಕಾಏಕಿ ಬಾಲಕಿ ಮೇಲೆರಗಿ ರಾಜಾರೋಷವಾಗಿ ಮುತ್ತಿಟ್ಟು ಕಿರುಕುಳ ನೀಡಿದ್ದಾನೆ. ಈ ಘಟನೆ ಜುಲೈ 25 ರಂದು ಪಾಕಿಸ್ತಾನದ ಕಸೂರ್‌ನ ಶಾ ಇನಾಯತ್‌ ಕಾಲೋನಿಯಲ್ಲಿ ನಡೆದಿದ್ದು ಎಂದು ಹೇಳಲಾಗುತ್ತಿದೆ.

ಈ ಕುರಿತ ವಿಡಿಯೋವನ್ನು ದಿವ್ಯಾ ಗಂಡೋತ್ರಾ ಟಂಡನ್‌ ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು “ಕಿರಿದಾಗ ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಚಿಕ್ಕ ಮಗುವಿಗೆ ಕಿರುಕುಳ ನೀಡಿದ ವ್ಯಕ್ತಿ, ಇಂತಹ ರಾಕ್ಷಸರು ಅಟ್ಟಹಾಸ ಮೆರೆಯುವಾಗ ಕಾನೂನು ಏಕೆ ಮೌನವಾಗಿ ಕುಳಿತಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

30/07/2025 08:43 pm

Cinque Terre

33.07 K

Cinque Terre

0

ಸಂಬಂಧಿತ ಸುದ್ದಿ