", "articleSection": "Crime,News,Religion", "image": { "@type": "ImageObject", "url": "https://prod.cdn.publicnext.com/s3fs-public/421698-1753799235-26~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹ ಹೂತಿದ್ದೇನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರನ ಗುರುತಿಸಿರುವ ಸ್ಥಳದಲ್ಲಿ ಮೊದಲ...Read more" } ", "keywords": "ಮಂಗಳೂರು: ಧರ್ಮಸ್ಥಳ ಪ್ರಕರಣ- ಮೊದಲ ದಿನ ಒಂದು ಸ್ಥಳದಲ್ಲಿ ಮಾತ್ರ ಅಗೆತ, ಆದರೆ ಪತ್ತೆಯಾಗಿಲ್ಲ ಕಳೇಬರ Dharmasthala case excavation Dharmasthala remains search No body found Dharmasthala case First day excavation Dharmasthala Mangaluru Dharmasthala investigation Dharmasthala mass burial probe SIT investigation Dharmasthala Dharmasthala whistleblower claims Alleged graves Dharmasthala Dharmasthala temple controversy Search for bodies Dharmasthala", "url": "https://dashboard.publicnext.com/node" }
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹ ಹೂತಿದ್ದೇನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರನ ಗುರುತಿಸಿರುವ ಸ್ಥಳದಲ್ಲಿ ಮೊದಲ ದಿನವಾದ ಮಂಗಳವಾರ ಒಂದು ಗುಂಡಿಯನ್ನಷ್ಟೇ ಅಗೆಯಲು ಸಾಧ್ಯವಾಗಿದೆ. ಆದರೆ ಯಾವುದೇ ಕಳೇಬರ ಮಾತ್ರ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದಲ್ಲಿ 13 ಜಾಗಗಳನ್ನು ಸಾಕ್ಷಿ ದೂರುದಾರ ಎಸ್ಐಟಿ ಅಧಿಕಾರಿಗಳಿಗೆ ಸೋಮವಾರ ತೋರಿಸಿದ್ದನು. ಈ ಸ್ಥಳಗಳಲ್ಲಿ ಕಳೆಬರದ ಉತ್ಖನನ ನಡೆಸಲು ಎಸ್ಐಟಿ ತಂಡ ಮಧ್ಯಾಹ್ನ 12ಗಂಟೆ ವೇಳೆಗೆ ಸಾಕ್ಷಿ ದೂರುದಾರರನ್ನು ನೇತ್ರಾವತಿ ಸ್ನಾನ ಘಟ್ಟದ ಬಳಿಗೆ ಕರೆ ತಂದಿತ್ತು. ಗುಂಡಿ ಅಗೆಯಲು ಕಾರ್ಮಿಕರೂ ಬಂದಿದ್ದರು. ಸೋಮವಾರ ಸಾಕ್ಷಿ ದೂರುದಾರ ತಾನು ಇಲ್ಲೇ ಮೃತದೇಹ ಹೂತಿಟ್ಟಿದ್ದೇನೆ ಎಂದು ಪ್ರಥಮವಾಗಿ ಗುರುತಿಸಿದ್ದ ಸ್ಥಳದಲ್ಲಿ ಗುಂಡಿ ಅಗೆಯುವ ಕಾರ್ಯ ಆರಂಭವಾಗಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೇ ಕಾರ್ಮಿಕರಿಂದ ಗುಂಡಿ ಅಗೆಯುವ ಕಾರ್ಯ ಆರಂಭಗೊಂಡಿತ್ತು. ಸಾಕ್ಷಿ ದೂರುದಾರ ವ್ಯಕ್ತಿಯೂ ಮುಸುಕು ಧರಿಸಿ ಸ್ಥಳದಲ್ಲಿ ಹಾಜರಿದ್ದನು. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಬೆಳ್ತಂಗಡಿ ತಾಲ್ಲೂಕಿನ ತಹಶೀಲ್ದಾರ್ ಪೃಥ್ವಿ ಸಾನಿಕಂ, ಎಸ್ಐಟಿಯ ಅಧಿಕಾರಿಯಾಗಿರುವ ಆಂತರಿಕ ಭದ್ರತಾ ವಿಭಾಗದ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ಇತರ ಅಧಿಕಾರಿಗಳು ಸ್ಥಳದಲ್ಲಿದ್ದು ಮಾರ್ಗದರ್ಶನ ಮಾಡುತ್ತಿದ್ದರು. ವಿಧಿವಿಜ್ಞಾನ ತಂಡದ ಅಧಿಕಾರಿಗಳೂ ಸ್ಥಳದಲ್ಲಿದ್ದರು. ಅಗೆಯುವ ದೃಶ್ಯವನ್ನು ಎಸ್‌ಐಟಿಯ ಸಿಬ್ಬಂದಿ ವೀಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು. ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೂಡಾ ಮಾಡಲಾಗಿತ್ತು.
ಹಾರೆ, ಗುದ್ದಲಿ ಮೂಲಕ ಮೊದಲ ಸ್ಥಳದಲ್ಲಿ ಅಗೆಯುವ ಕಾರ್ಯ ಆರಂಭವಾಗಿತ್ತು. 3-4 ಅಡಿ ಅಗೆತ ಕಾರ್ಯ ನಡೆಯುತ್ತಿದ್ದಂತೆ ನೀರಿನ ಒರತೆ ಗುಂಡಿ ಅಗೆತಕ್ಕೆ ಅಡ್ಡಿಯಾಗಿತ್ತು. ಆದ್ದರಿಂದ ಮಧ್ಯಾಹ್ನದ ಬಳಿಕ ಸಣ್ಣ ಜೆಸಿಬಿಯನ್ನು ಸ್ಥಳಕ್ಕೆ ತರಿಸಿ ಅಗೆಯುವ ಪ್ರಕ್ರಿಯೆ ನಡೆಯಲಾಯಿತು.
ಎಸ್ಐಟಿ ತಂಡಕ್ಕೆ ಇಂದು ಮಧ್ಯಾಹ್ನದಿಂದ ಸಂಜೆವರೆಗೆ ಸಾಕ್ಷಿ ದೂರುದಾರ ಸೂಚಿಸಿರುವ ಮೊದಲ ಸ್ಥಳದಲ್ಲಿ ಮಾತ್ರ ಉತ್ಖನನ ಮಾಡಲು ಸಾಧ್ಯವಾಯಿತು. ಸುಮಾರು 8ಅಡಿಯಷ್ಟು ಅಗೆಯುವ ಕಾರ್ಯ ನಡೆದರೂ ಯಾವುದೇ ಕಳೇಬರ ಮಾತ್ರ ಸಿಕ್ಕಿಲ್ಲ. ಆದ್ದರಿಂದ ಸಂಜೆ 6.30ಆಗುತ್ತಿದ್ದಂತೆ ಉತ್ಖನನ ಕಾರ್ಯ ಸ್ಥಗಿತಗೊಳಿಸಿ ಎಸ್ಐಟಿ ತಂಡ ಮರಳಿದೆ. ನಾಳೆ ಎರಡನೇ ಸ್ಥಳದಲ್ಲಿ ಗುಂಡಿ ಅಗೆಯುವ ಸಾಧ್ಯತೆಯಿದ್ದು, ಅಲ್ಲಿ ಕಳೆಬರ ಸಿಗುವುದೇ ಅಥವಾ ಇಂದಿನಂತೆ ಅಲ್ಲೂ ಕಳೇಬರ ಸಿಗದಂತಾಗುವುದೇ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
PublicNext
29/07/2025 07:57 pm