", "articleSection": "Crime,Viral", "image": { "@type": "ImageObject", "url": "https://prod.cdn.publicnext.com/s3fs-public/463655-1753808769-WhatsApp-Image-2025-07-29-at-10.16.14-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ತೆಲಂಗಾಣ: “ಹೆತ್ತವರಿಗೆ ಹೆಗ್ಗಣದ ಮುದ್ದು ಅನ್ನೋದು ಎಲ್ಲರಿಗೂ ಗೊತ್ತಿರುವ ಮಾತು. ಮಕ್ಕಳಿಗಾಗಿ ತಾಯಿಯ ಸರ್ವಸ್ವ ತ್ಯಾಗದ ಅನೇಕ ಉದಾಹರಣೆಗಳು ಇವ...Read more" } ", "keywords": "Instagram, mother abandons child, bus stop, heartless mother, child abandonment, social media, Instagram story. ", "url": "https://dashboard.publicnext.com/node" } ಇನ್‌ಸ್ಟಾಗ್ರಾಂ ಪ್ರೇಮಕ್ಕಾಗಿ 'ಬಸ್ ನಿಲ್ದಾಣದಲ್ಲಿ ಮಗು ಬಿಟ್ಟು ಹೋದ ನಿರ್ದಯಿ ತಾಯಿ'
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್‌ಸ್ಟಾಗ್ರಾಂ ಪ್ರೇಮಕ್ಕಾಗಿ 'ಬಸ್ ನಿಲ್ದಾಣದಲ್ಲಿ ಮಗು ಬಿಟ್ಟು ಹೋದ ನಿರ್ದಯಿ ತಾಯಿ'

ತೆಲಂಗಾಣ: “ಹೆತ್ತವರಿಗೆ ಹೆಗ್ಗಣದ ಮುದ್ದು ಅನ್ನೋದು ಎಲ್ಲರಿಗೂ ಗೊತ್ತಿರುವ ಮಾತು. ಮಕ್ಕಳಿಗಾಗಿ ತಾಯಿಯ ಸರ್ವಸ್ವ ತ್ಯಾಗದ ಅನೇಕ ಉದಾಹರಣೆಗಳು ಇವೆ. ಆದರೆ, ಇಲ್ಲೊಬ್ಬಳು ತಾಯಿ ತಾಯಂದಿರ ಸ್ಥಾನಕ್ಕೆ ಕಳಂಕ ತರುವಂತಹ ಕೃತ್ಯವನ್ನೆಸಗಿದ್ದಾಳೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಪ್ರೇಮಿಯೊಂದಿಗೆ ಓಡಿಹೋಗಲು, ತನ್ನ 15 ತಿಂಗಳ ಗಂಡು ಮಗುವನ್ನೇ ನಲ್ಗೊಂಡ ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಿಟ್ಟುಹೋದ ಹೃದಯವಿದ್ರಾವಕ ಘಟನೆ ನಡೆದಿದೆ.”

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಹೀಗೆ ಮಗುವನ್ನ ಬಿಟ್ಟ ಹೋದ ಪಾಪಿ ತಾಯಿಯನ್ನ ನವೀನಾ ಎಂದು ಗುರುತಿಸಲಾಗಿದ್ದು, ಮಗುವನ್ನು ಧನುಷ್ ಎಂದು ಗುರುತಿಸಲಾಗಿದೆ. ಇವಳು ಹೈದರಾಬಾದ್‌ನ ನಿವಾಸಿಯಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ನಲ್ಗೊಂಡದ ಓಲ್ಡ್ ಸಿಟಿ ಪ್ರದೇಶದ ವ್ಯಕ್ತಿಯೊಂದಿಗೆ ಸಂಬಂಧ ಬೆಳಸಿಕೊಂಡು ಪತಿಯನ್ನ ತೊರೆದು ಮಗುವನ್ನ ಬಸ್‌ ನಿಲ್ದಾನದಲ್ಲಿ ಬಿಟ್ಟು ಪರಾರಿಯಾಗಿದ್ದಳು.

ಮಗುವನ್ನ ಬಿಟ್ಟು ಹೋದಾಗ ಸ್ವಲ್ಪ ಸಮಯದ ನಂತರ ಮಗು ಜೋರಾಗಿ ಅಳುದನ್ನ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ, ನವೀನಾ ಮಗುವನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗುತ್ತಿರುವುದು, ನಂತರ ಬೈಕ್‌ನಲ್ಲಿ ವ್ಯಕ್ತಿಯೊಂದಿಗೇ ತೊಲಗುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಂಡುಬಂದಿವೆ. ಇದೇ ದೃಶ್ಯಗಳನ್ನು ಮಗುವಿಗೆ ತೋರಿಸಿದಾಗ, ಪರದೆಯ ಮೇಲೆ ತಾಯಿಯನ್ನು ನೋಡಿ "ಮಮ್ಮಿ" ಎಂದು ಕರೆದಿದ್ದ ದೃಶ್ಯ ಮನ ಕಲುಕುವಂತಿದೆ. ವಾಹನದ ನಂಬರದ ಆಧಾರದಲ್ಲಿ, ಪೊಲೀಸರು ಬೈಕ್ ಮಾಲೀಕರನ್ನು ಪತ್ತೆಹಚ್ಚಿ ತನಿಖೆ ಮುಂದುವರೆಸಿದರು. ಬೈಕ್ ನವೀನಾಳ ಪ್ರೇಮಿಗೆ ಹೊಂದಿದ್ದದ್ದೆಂದು ತಿಳಿದು ಬಂದಿದೆ. ಈ ಹಿನ್ನೆಲೆ, ಪೊಲೀಸರು ನವೀನಾ, ಆಕೆಯ ಪ್ರಿಯಕರ ಹಾಗೂ ಪತಿಯನ್ನು ಕರೆಸಿ ಪೂರ್ಣ ತನಿಖೆಯ ನಂತರ, 15 ತಿಂಗಳ ಮಗುವನ್ನು ಆತನ ತಂದೆಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Edited By :
PublicNext

PublicNext

29/07/2025 10:36 pm

Cinque Terre

36.84 K

Cinque Terre

12

ಸಂಬಂಧಿತ ಸುದ್ದಿ