", "articleSection": "Politics,Law and Order,Government,International", "image": { "@type": "ImageObject", "url": "https://prod.cdn.publicnext.com/s3fs-public/235762-1753809694-WhatsApp-Image-2025-07-29-at-10.15.34-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ನವದೆಹಲಿ: ಪೆಹಲ್ಗಾಮ್ ದಾಳಿ ನಂತರ ನಡೆದ ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ವಿಚಾರವಾಗಿ ನಾನೇ ಕದನ ವಿರಾಮ ಘೋಷಿಸಿದ್ದು ಎಂದು ಅಮೆರಿಕ ಅಧ್ಯಕ್ಷ...Read more" } ", "keywords": "Rahul Gandhi on Trump, Modi Trump statement, Ceasefire statement, Rahul Gandhi criticism, Modi Trump meeting, India US relations, Rahul Gandhi news, Trump Modi ceasefire, India Pakistan relations ", "url": "https://dashboard.publicnext.com/node" }
ನವದೆಹಲಿ: ಪೆಹಲ್ಗಾಮ್ ದಾಳಿ ನಂತರ ನಡೆದ ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ವಿಚಾರವಾಗಿ ನಾನೇ ಕದನ ವಿರಾಮ ಘೋಷಿಸಿದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದ್ರೆ ಈ ಹೇಳಿಕೆಯನ್ನು ಪ್ರಧಾನಿ ಮೋದಿ ಇಂದು ಲೋಕಸಭೆ ಅಧಿವೇಶನದ ಭಾಷಣದಲ್ಲಿ ಯಾಕೆ ಪ್ರಸ್ತಾಪಿಸಲಿಲ್ಲ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಈ ಕುರಿತು ಸಂಸತ್ತಿನ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡೊನಾಲ್ಡ್ ಟ್ರಂಪ್ ತಾವೇ ಯುದ್ಧ ನಿಲ್ಲಿಸಿರುವುದಾಗಿ 29 ಬಾರಿ ಹೇಳಿದ್ದಾರೆ. ಇದು ನಿಜವಲ್ಲದಿದ್ದರೆ, ಪ್ರಧಾನಿ ನಿರಾಕರಿಸಬೇಕು. ಇಂದಿರಾ ಗಾಂಧಿಯವರ ಧೈರ್ಯದಲ್ಲಿ ಪ್ರತಿಶತ 50 ರಷ್ಟಾದರೂ ಧೈರ್ಯವಿದ್ದರೆ, ಟ್ರಂಪ್ ಅವರನ್ನು ಸುಳ್ಳುಗಾರ ಎಂದು ಸಾರ್ವಜನಿಕವಾಗಿ ಹೇಳುವಂತೆ ಒತ್ತಾಯಿಸಿದ ರಾಹುಲ್, ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.
'ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ' ಎಂಬ ಮಾತು ಮೋದಿ ಬಾಯಿಂದ ಬರಲಿಲ್ಲ. 'ಆಪರೇಶನ್ ಸಿಂಧೂರ' ಸಮಯದಲ್ಲಿ ನಮ್ಮ ಶತೃ ದೇಶವಾದ ಚೀನಾ ಸೇನೆಯು ಪಾಕಿಸ್ತಾನ ಸೇನೆಗೆ ಸಹಾಯ ಮಾಡಿದೆ. ಚೀನಾದ ಭೂಸೇನೆ, ವಾಯು ಸೇನೆಯು ಪಾಕ್ ಬೆಂಬಲಕ್ಕೆ ನಿಂತಿದೆ. ಈ ಬಗ್ಗೆ ಪ್ರಧಾನಿಯಾಗಲಿ, ರಕ್ಷಣಾ ಸಚಿವರಾಗಲಿ, ಗೃಹ ಸಚಿವರಾಗಲಿ ಈ ಬಗ್ಗೆ ಮಾತನಾಡಿಲ್ಲ ಎಂದು ರಾಹುಲ್ ಗಾಂಧಿ ಕೇಂದ್ರ ಸರಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
PublicNext
29/07/2025 10:52 pm