ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - 20 ಲಕ್ಷ ವೆಚ್ಚದಲ್ಲಿ 'ಜಮಖಾನ' ಅಭಿವೃದ್ಧಿ: ಸಂಸದ ಎಂ. ಮಲ್ಲೇಶಬಾಬು

ಕೆಜಿಎಫ್‌: ಊರಿಗಾಂನಲ್ಲಿರುವ ಬಿಜಿಎಂಎಲ್‌ಗೆ ಸೇರಿದ ಜಮಖಾನ ಮೈದಾನವನ್ನು 20 ಲಕ್ಷ ವೆಚ್ಚದಲ್ಲಿ ಆಧುನೀಕರಿಸಿ ಸಾರ್ವಜನಿಕ ಸೇವೆಗೆ ಬಿಡಲಾಗುವುದು ಎಂದು ಸಂಸದ ಎಂ.ಮಲ್ಲೇಶಬಾಬು ಹೇಳಿದರು.

ಜಮಖಾನ ಮೈದಾನಕ್ಕೆ ಬಿಜಿಎಂಎಲ್‌ ಅಧಿಕಾರಿಗಳ ಜತೆ ಭೇಟಿ ನೀಡಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಜಮಖಾನ ಮೈದಾನ ಬಳಕೆ ಮಾಡದೆ ಇರುವುದರಿಂದ ಮುಳ್ಳುಗಿಡಗಳು ಬೆಳೆದುನಿಂತಿವೆ. ಹಲವಾರು ರಾಷ್ಟ್ರೀಯ ಮಟ್ಟದ ಫುಟ್‌ಬಾಲ್‌ ಪಂದ್ಯಾವಳಿಗಳು ಈ ಮೈದಾನದಲ್ಲಿ ನಡೆದಿದ್ದು, ಮಳೆ ಬಿದ್ದರೂ ನೀರು ನಿಲ್ಲದ ರೀತಿಯಲ್ಲಿ ಮೈದಾನ ನಿರ್ಮಿಸಲಾಗಿದೆ. ಬೆಮಲ್ ಸಂಸ್ಥೆಗೆ ತಾತ್ಕಾಲಿಕವಾಗಿ ಜಮಖಾನ ಮೈದಾನ ನೀಡಲಾಗಿತ್ತು. ಇದರಿಂದಾಗಿ ಈ ಮೈದಾನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಇದೀಗ ಮತ್ತೆ ಸಾರ್ವಜನಿಕರ ಬೇಡಿಕೆಯಂತೆ ಮೈದಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ, ಅಂದಾಜು ವೆಚ್ಚದ ಪಟ್ಟಿ ತಯಾರಿಸಿದ್ದಾರೆ ಎಂದು ಹೇಳಿದರು.

Edited By : PublicNext Desk
Kshetra Samachara

Kshetra Samachara

05/09/2025 01:03 pm

Cinque Terre

300

Cinque Terre

0

ಸಂಬಂಧಿತ ಸುದ್ದಿ