ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಸಿಟಿ ಸೈಕಲ್ ರೌಂಡ್ಸ್ ಮೂಲಕ ನಗರಸಭೆ ಪಾರ್ಕ್​ಗಳಿಗೆ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಭೇಟಿ, ಪರಿಶೀಲನೆ

ಕೋಲಾರ : ನಗರದ ಪ್ರಮುಖ ಉದ್ಯಾನವನಗಳ ಸ್ಥಿತಿಗತಿ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು ಇಂದು‌ ಸೈಕಲ್ ರೌಂಡ್ಸ್ ನಡೆಸಿದರು. ಈ ವೇಳೆ ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಾಥ್ ನೀಡಿದರು. ಜಿಲ್ಲಾಧಿಕಾರಿಗಳು ಸರ್ವಜ್ಞ ಪಾರ್ಕ್, ಅಂಬೇಡ್ಕರ್ ಪಾರ್ಕ್, ಕುವೆಂಪು ಪಾರ್ಕ್ ಸೇರಿದಂತೆ ನಗರದ ವಿವಿಧ ಉದ್ಯಾನವನಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಭೇಟಿಯು, ಇಂದಿನಿಂದ ಆರಂಭಗೊಂಡ 'ಸ್ವಚ್ಛತಾ ಹಿ ಸೇವಾ' ಆಂದೋಲನದ ಭಾಗವಾಗಿತ್ತು.

ಅಕ್ಟೋಬರ್ 2ರವರೆಗೆ ನಡೆಯಲಿರುವ ಈ ಅಭಿಯಾನದಲ್ಲಿ, ಪ್ರತಿ ಭಾನುವಾರ ನಗರದ ಎಲ್ಲಾ ಉದ್ಯಾನವನಗಳನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛಗೊಳಿಸಲು ನಿರ್ಧರಿಸಲಾಗಿದೆ. ಕೋಲಾರದಲ್ಲಿ ಒಟ್ಟು 19 ಪಾರ್ಕ್​ಗಳಿವೆ. ಪಾರ್ಕ್​ಗಳಲ್ಲಿ ಅನಿಯಮಿತವಾಗಿ ಬೆಳೆದ ಗಿಡ-ಮರಗಳನ್ನು ಕತ್ತರಿಸಿ ಸರಿಪಡಿಸಲು ಡಿಸಿ ಸೂಚಿಸಿದರು. ಅಲ್ಲದೆ, ನಡಿಗೆ ಪಥವನ್ನು (ವಾಕಿಂಗ್ ಟ್ರ್ಯಾಕ್) ಸಮತಟ್ಟುಗೊಳಿಸಿ, ನಡೆದಾಡುವವರಿಗೆ ಅನುಕೂಲ ಕಲ್ಪಿಸಲು ಸೂಚಿಸಲಾಯಿತು.

Edited By : PublicNext Desk
Kshetra Samachara

Kshetra Samachara

07/09/2025 02:41 pm

Cinque Terre

560

Cinque Terre

0

ಸಂಬಂಧಿತ ಸುದ್ದಿ