ಕೋಲಾರ - ಕೇಂದ್ರದ ಎನ್ಡಿಎ ಸರ್ಕಾರ ಜಿಎಸ್ಟಿ ಸರಳೀಕರಣ ಮಾಡುವ ಮೂಲಕ ಮಧ್ಯಮ ವರ್ಗದವರಿಗೆ ದೀಪಾವಳಿ ಗಿಫ್ಟ್ ನೀಡಿದೆ ಎಂದು ಕೋಲಾರ ಜಿಲ್ಲಾ ಬಿಜೆಪಿ ಸಂಭ್ರಮಾಚರಣೆಯನ್ನು ನಡೆಸಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆಯನ್ನು ನಡೆಸಿದರು."ಕೇಂದ್ರ ಸರ್ಕಾರ ಜಿಎಸ್ಟಿ ಕಡಿತ ಮಾಡಿ ದೇಶದ ಜನತೆಗೆ ದೀಪಾವಳಿ ಉಡುಗೂರೆಯನ್ನು ನೀಡಿದೆ. ಜಿಎಸ್ಟಿ ಕೌನ್ಸಿಲ್ನಲ್ಲಿ ನಾಲ್ಕು ಸ್ಲ್ಯಾಬ್ ಅನ್ನು ಎರಡಕ್ಕೆ ಇಳಿಸಿದ್ದಾರೆ. ಜಿಎಸ್ಟಿಯನ್ನು 18% ರಿಂದ 5% ಕ್ಕೆ ಇಳಿಸಿದ್ದಾರೆ. ಭಾರತ ಜಾಗತಿಕ ಸವಾಲನ್ನು ಮೆಟ್ಟಿ ನಿಲ್ಲುವ ಸಂದರ್ಭದಲ್ಲಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ಗ್ರಾಹಕರಿಗೆ ಕಡಿಮೆ ದರಕ್ಕೆ ವಸ್ತುಗಳು ಲಭ್ಯವಾಗುತ್ತದೆ. ಅಲ್ಲದೇ ಉತ್ಪಾದಕರಿಗೂ ಸಹ ಒಳ್ಳೆಯ ಬೆಳವಣಿಗೆ ಆಗಿದೆ. ಮಧ್ಯಮ ವರ್ಗದವರಿಗೆ ಇದು ಅನುಕೂಲವಾಗಲಿದೆ" ಎಂದು ಸಂಭ್ರಮಾಚರಣೆಯನ್ನು ಮಾಡಿದರು.
Kshetra Samachara
06/09/2025 04:10 pm