ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಜಿಲ್ಲೆಯ ಎಲ್ಲಾ ಉದ್ಯಾನವನಗಳ ಅಂದ ಹೆಚ್ಚಿಸಲು ಜಿಲ್ಲಾಧಿಕಾರಿಗಳ ಸೂಚನೆ

ಕೋಲಾರ. ಜಿಲ್ಲೆಯ ನಗರಸಭೆ ಮತ್ತು ಪುರಸಭೆ ಪಟ್ಟಣ ಪಂಚಾಯತಿ ಅಧೀನದಲ್ಲಿರುವ ಎಲ್ಲಾ ಉದ್ಯಾನವನಗಳು ಮುಂಬರುವ ಅಕ್ಟೊಬರ್ 2ರ ಗಾಂಧಿ ಜಯಂತಿ ಒಳಗಾಗಿ ಸುಸಜ್ಜಿತ ಗೊಳಿಸಬೇಕೆಂದು ಹಾಗೂ ಸಂಪೂರ್ಣ ಅಭಿವೃದ್ಧಿ ಮಾಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದರು. ಕೋಲಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ನಗರಸಭೆ,ಪುರಸಭೆ,ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳ ಸಭೆಯನ್ನು ಕುರಿತು ಮಾತನಾಡಿದರು.

ಮುಂದಿನ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಇರುವುದರಿಂದ ಎಲ್ಲಾ ಉದ್ಯಾನವನದಲ್ಲಿಯೂ ಅಧಿಕಾರಿಗಳು ಜನಪ್ರತಿನಿಧಿಗಳು ಸಾರ್ವಜನಿಕರು ಸೇರಿ ಶ್ರಮಧಾನವನ್ನು ಪ್ರಾರಂಭ ಮಾಡಬೇಕು ಈ ಕಾರ್ಯವು ಅಕ್ಟೋಬರ್ 2 ವರೆಗೂ ನಿರಂತರವಾಗಿ ಮುನ್ನಡೆಸಿ ಎಲ್ಲಾ ಉದ್ಯಾನವನಗಳನ್ನು ಆಕರ್ಷಕ ರೀತಿಯಲ್ಲಿ ಕಾಣುವಂತೆ ಮಾಡಿ ಸಾರ್ವಜನಿಕರಿಗೆ ಒದಗಿಸಬೇಕು ಎಂದು ತಿಳಿಸಿದರು. ನಗರದ ಭಾಗಗಳಲ್ಲಿ ಯಾವುದೇ ರೀತಿಯ ಕಸಕ್ಕೆ ಬೆಂಕಿ ಇಡುವುದನ್ನು ತಪ್ಪಿಸಬೇಕು ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.

Edited By : PublicNext Desk
Kshetra Samachara

Kshetra Samachara

06/09/2025 11:55 am

Cinque Terre

1.44 K

Cinque Terre

0

ಸಂಬಂಧಿತ ಸುದ್ದಿ