", "articleSection": "Crime,Accident,News", "image": { "@type": "ImageObject", "url": "https://prod.cdn.publicnext.com/s3fs-public/421698-1757073861-08~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೂಡಿಗೆರೆ: ಕಡೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೂಡಿಗೆರೆ–ಕೊಟ್ಟಿಗೆಹಾರ ನಡುವೆ ಅಪಘಾತ ಪ್ರಕರಣಗಳು ಮುಂದುವರೆದಿದೆ. ಬಣಕಲ್ ಪಶು ಆಸ್ಪತ್ರೆ ...Read more" } ", "keywords": "Mudigere,National Highway 173,accidents,serious injuries,road accidents,local news,Karnataka,Chikmagalur,traffic accidents", "url": "https://dashboard.publicnext.com/node" } ಮೂಡಿಗೆರೆ: ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಮುಂದುವರೆದ ಅಪಘಾತ ಪ್ರಕರಣಗಳು - ಇಬ್ಬರಿಗೆ ಗಂಭೀರ ಗಾಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಿಗೆರೆ: ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಮುಂದುವರೆದ ಅಪಘಾತ ಪ್ರಕರಣಗಳು - ಇಬ್ಬರಿಗೆ ಗಂಭೀರ ಗಾಯ

ಮೂಡಿಗೆರೆ: ಕಡೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೂಡಿಗೆರೆ–ಕೊಟ್ಟಿಗೆಹಾರ ನಡುವೆ ಅಪಘಾತ ಪ್ರಕರಣಗಳು ಮುಂದುವರೆದಿದೆ. ಬಣಕಲ್ ಪಶು ಆಸ್ಪತ್ರೆ ಸಮೀಪ ಕಾರೊಂದು ನಿಯಂತ್ರಣ ತಪ್ಪಿ ನೇರವಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ ವಾಹನ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ತಕ್ಷಣ ಸ್ಥಳೀಯರು ಹಾಗೂ ಬಣಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದು ಹೆದ್ದಾರಿ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿದ ಪರಿಣಾಮವೇ ಇಂತಹ ಅಪಘಾತಗಳು ಹೆಚ್ಚಾಗುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ವಿದ್ಯುತ್ ಕಂಬಗಳು ಹಾನಿಗೊಂಡಿರುವುದರಿಂದ ವಿದ್ಯುತ್ ಸರಬರಾಜು ಸಹ ನಿಲುಗಡೆಯಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Suman K
PublicNext

PublicNext

05/09/2025 03:14 pm

Cinque Terre

9.95 K

Cinque Terre

0

ಸಂಬಂಧಿತ ಸುದ್ದಿ