ಹುಬ್ಬಳ್ಳಿ: ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆಯಲ್ಲಿ ಹೋಗುತ್ತಿರುವಾಗಲೇ ಗಟಾರ್‌ಗೆ ಜಾರಿದ ಪರಿಣಾಮ, ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ರಾಯನಾಳ ಗ್ರಾಮದಲ್ಲಿ ನಡೆದಿದೆ.
ಹುಬ್ಬಳ್ಳಿಯಿಂದ ರಾಯನಾಳಕ್ಕೆ ಹೋದ ಬಸ್, ಆ ಗ್ರಾಮದಲ್ಲಿ ಗಟಾರ್ ಪಕ್ಕದಲ್ಲಿ ಸಿಲುಕಿಕೊಂಡಿದೆ. ಅಲ್ಲೇ ಪಕ್ಕದಲ್ಲೇ ಮನೆಗಳು ಇವೆ. ಅಪ್ಪಿತಪ್ಪಿ ಬಸ್ ಏನಾದ್ರೂ ಪಲ್ಟಿ ಹೊಡೆದಿದ್ದರೆ ಬಹಳಷ್ಟು ಅನಾಹುತಗಳು ಆಗುತ್ತಿದ್ದವು. ಕೂಡಲೇ ಗ್ರಾಮಸ್ಥರು ಸಿಲುಕಿ ಕೊಂಡಿರುವ ಬಸ್ ನ್ನು ದೂಕಿ ಹೊರಗೆ ತೆಗೆದಿದ್ದಾರೆ. ಆಗ ಪಕ್ಕದಲ್ಲಿದ್ದ ಮನೆ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/09/2025 12:41 pm