ಹೊಸಪೇಟೆ: ಒಂದು ಕಡೆ ಧರ್ಮಸ್ಥಳ ವಿಚಾರವಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಪರ - ವಿರೋಧ ಚರ್ಚೆ ನಡೆಯುತ್ತಿದೆ. ಇತ್ತ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ 11ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾವಚಿತ್ರ ಇರಿಸಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು.
ಹೊಸಪೇಟೆಯ ಹೃದಯ ಭಾಗ ಆಗಿರೋ ಐತಿಹಾಸಿಕ ಒಡಕರಾಯ ದೇಗುಲ ಬಳಿ ಕೂಡಿಸಲಾಗಿರೋ ಹಿಂದೂ ಮಹಾಗಣಪತಿ ವಿಸರ್ಜನೆ ವೇಳೆ ಈ ದೃಶ್ಯ ಕಂಡುಬಂದಿದೆ. 11ನೇ ದಿನದ ಗಣೇಶ ವಿಸರ್ಜನೆ ವೇಳೆ ಅಪಾರ ಸಂಖ್ಯೆಯಲ್ಲಿ ಸೇರಿರೋ ಹಿಂದೂ ಬಾಂಧವರು, ಡಿಜೆ ಸೌಂಡಿಗೆ ಭರ್ಜರಿ ಸ್ಟೆಪ್ ಹಾಕಿದ್ರು. ಅಷ್ಟೇ ಅಲ್ಲದೆ, ಜಾಮೀಯಾ ಮಸೀದಿ ಎದುರು ಶ್ರೀಗಣೇಶ ಮೂರ್ತಿ ನೋಡಲು ಹತ್ತು ಸಾವಿರಕ್ಕೂ ಅಧಿಕ ಜನ ಭಾಗಿ ಆಗಿದ್ರು.
PublicNext
06/09/2025 10:50 pm