", "articleSection": "Crime,International,Viral", "image": { "@type": "ImageObject", "url": "https://prod.cdn.publicnext.com/s3fs-public/387839-1757330391-WhatsApp-Image-2025-09-08-at-4.46.19-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗುಜರಾತ್ ಮೂಲದ ಯುವತಿಯೊಬ್ಬರು ಅಮೆರಿಕದ ಅಂಗಡಿಯೊಂದರಲ್ಲಿ ಕಳ್ಳತನ ಮಾಡುವ ವೇಳೆ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದು, ಘಟನೆಯ ವಿಡಿಯೋ ಇದೀಗ ಸೋ...Read more" } ", "keywords": "American shoplifting, Gujarati girl theft, US police interrogation, Indian caught stealing, viral video, shop theft USA, Indian youth crime, Target store theft, America incident, viral news", "url": "https://dashboard.publicnext.com/node" }
ಗುಜರಾತ್ ಮೂಲದ ಯುವತಿಯೊಬ್ಬರು ಅಮೆರಿಕದ ಅಂಗಡಿಯೊಂದರಲ್ಲಿ ಕಳ್ಳತನ ಮಾಡುವ ವೇಳೆ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದು, ಘಟನೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಜನವರಿ 15ರಂದು ನಡೆದಿದೆ.
ಗುಜರಾತ್ ಮೂಲದ ಈ ಯುವತಿ ಈ ಹಿಂದೆ ಹಲವು ಬಾರಿ ಕಳ್ಳತನ ಮಾಡಿ ಪರಾರಿಯಾಗಿದ್ದಾಳೆ. ಆದರೆ ಇದೇ ಮೊದಲ ಬಾರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ ಎಂದು ವರದಿಯಾಗಿದೆ.
ಅಮೆರಿಕದ ಟಾರ್ಗೆಟ್ ಅಂಗಡಿಗಳಲ್ಲಿ ಕಳ್ಳತನ ಮಾಡಿ ನಂತರ ಅದನ್ನು ಮರುಮಾರಾಟ ಮಾಡುತ್ತಿದ್ದಾಳೆ ಎಂದು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾಳೆ. ಈ ವೀಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಕಳ್ಳತನದ ವೇಳೆ ಅಂಗಡಿಯ ಸಿಬ್ಬಂದಿಯ ಕೈಗೆ ಸಿಕ್ಕಿಬಿದ್ದ ಆಕೆಯನ್ನು ಸ್ಥಳೀಯ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಭಯದಿಂದ ಅಳುತ್ತಿದ್ದ ಆಕೆಗೆ, ನಿನ್ನ ಮಾತೃಭಾಷೆ ಯಾವುದು? ಎಂದು ಕೇಳಿದಾಗ, ಗುಜರಾತಿ ಎಂದು ಉತ್ತರಿಸಿದ್ದಾಳೆ. ಅದು ಎಲ್ಲಿದೆ? ಎಂದಾಗ ಇಂಡಿಯಾ ಎಂದಿದ್ದಾಳೆ. ಅನುವಾದಕರ ಅಗತ್ಯವಿದೆಯೇ ಎಂದು ಕೇಳಿದಾಗ ಬೇಡ ಎಂದಿದ್ದಾಳೆ.
ಭಯದಿಂದ ಅತ್ತ ಆಕೆಗೆ ಹೈಪರ್‌ವೆಂಟಿಲೇಷನ್ ಲಕ್ಷಣ ಕಂಡುಬಂದಿದ್ದು, ಪೊಲೀಸರು ಮೊದಲು ಆಕೆಗೆ ಸಮಾಧಾನ ಹೇಳಿ, ನಂತರ ಆಕೆಯ ವಿಳಾಸ ಹಾಗೂ ಕೆಲವು ದಾಖಲೆಗಳ ಫೋಟೋ ತೆಗೆದುಕೊಂಡು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದರು.
PublicNext
08/09/2025 04:50 pm