ವಿಶ್ಲೇಷಣೆ: ವಿಜಯಕುಮಾರ ಗಾಣಿಗೇರ
ಪಬ್ಲಿಕ್ ನೆಕ್ಸ್ಟ್, ಸ್ಪೆಷಲ್ ಬ್ಯೂರೋ, ಹುಬ್ಬಳ್ಳಿ
ಪಾಕಿಸ್ತಾನ ಕ್ರಿಕೆಟಿಗರು ಅಸಭ್ಯ, ಅನುಚಿತ ವರ್ತನೆ, ಅಶಿಸ್ತಿನ ಮೂಟೆಗಳು ಎಂಬುದು ಇಡೀ ಕ್ರೀಡಾ ಜಗತ್ತಿಗೆ ಗೊತ್ತಿರುವ ವಿಚಾರ... 2025ರ ಏಷ್ಯಾಕಪ್ ಟೂರ್ನಿಯುದ್ದಕ್ಕೂ ಪಾಕ್ ಕ್ರಿಕೆಟಿಗರು ತೋರಿದ ಅನುಚಿತ ವರ್ತನೆಯನ್ನು ನಾವು ಕಂಡಿದ್ದೆವೆ. ಹೀಗಿರುವಾಗ ಅವರಿಗೆ ಹ್ಯಾಂಡ್‌ಶೇಕ್ ಕೊಡಬೇಕಿತ್ತು, ಭಾರತೀಯ ಆಟಗಾರರು ಕ್ರೀಡಾಸ್ಫೂರ್ತಿ ಮೆರೆಯಬೇಕಿತ್ತು ಎಂದು ವಾದಿಸುವುದು, ಬುದ್ಧಿ ಹೇಳವುದು ಎಷ್ಟು ಸರಿ..? ಹೀಗೊಂದು ಚರ್ಚೆ ಶುರುವಾಗಿದ್ದು ಖ್ಯಾತ ಪತ್ರಕರ್ತ, ಹೆಸರಾಂತ ಮಾಧ್ಯಮವೊಂದರ ಹಿರಿಯ ನಿರೂಪಕ ರಾಜ್‌ದೀಪ್ ಸರ್ದೇಸಾಯಿ ಅವರ ಎಕ್ಸ್ ಪೋಸ್ಟ್‌ನಿಂದಾಗಿ...
ಪಾಕಿಸ್ತಾನಿ ಆಟಗಾರರೊಂದಿಗೆ ಭಾರತ ತಂಡ ಹ್ಯಾಂಡ್‌ಶೇಕ್ ಮಾಡದೇ ಇರುವುದನ್ನು ನಾನು ಬೆಂಬಲಿಸುವುದಿಲ್ಲ. ಅದು ಕಳಪೆ ಫಾರ್ಮ್ ಮತ್ತು ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ರಾಜ್‌ದೀಪ್ ಸರ್ದೇಸಾಯಿ ಅವರು ಎಕ್ಸ್ ಪೋಸ್ಟ್ ಆರಂಭಿಸಿದ್ದಾರೆ. ಈ ಪೋಸ್ಟ್‌ಗೆ ತರಹೇವಾರಿ ಕಮೆಂಟ್‌ಗಳು ಬಂದಿವೆ. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾ ಕ್ರೀಡಾಸ್ಫೂರ್ತಿಯನ್ನು ರಾಜ್‌ದೀಪ್ ಅವರಿಗೆ ಅರ್ಥೈಸುವಂತೆ ಮಾಡಿದ್ದಾರೆ.
ಭಾರತೀಯ ಕ್ರಿಕೆಟಗರ ಕ್ರೀಡಾ ಸ್ಫೂರ್ತಿ ಇಡೀ ಜಗತ್ತಿಗೇ ಗೊತ್ತಿದೆ. ಬಾಲ್ ಟ್ಯಾಂಪರಿಂಗ್ ನಿಂದಾಗಿ ಬ್ಯಾನ್ ಆಗಿದ್ದ ಸ್ಟೀವ್ ಸ್ಮಿತ್ ಆಟಕ್ಕೆ ಮರಳಿದಾಗ ಅವರನ್ನು ಜನ ಕಾಲೆಳೆಯುತ್ತಿದ್ದರು. ಆಗ ಅವರ ಬೆಂಬಲಕ್ಕೆ ನಿಂತಿದ್ದು ನಮ್ಮ ಕಿಂಗ್ ವಿರಾಟ್ ಕೊಹ್ಲಿ ಎನ್ನುವುದನ್ನು ಮರೆಯುವ ಹಾಗಿಲ್ಲ... ಟೆಸ್ಟ್ ಪಂದ್ಯದ ವೇಳೆ ಬಾಂಗ್ಲಾ ಬ್ಯಾಟರ್ ಗಾಯಗೊಂಡಾಗ ಭಾರತೀಯ ತಂಡದ ವೈದ್ಯಾಧಿಕಾರಿ ಚಿಕಿತ್ಸೆ ಕೊಟ್ಟು ತಮ್ಮ ತಂಡ ಕ್ರೀಡಾಸ್ಫೂರ್ತಿ ಮೆರೆದಿತ್ತು.... ಆದರೆ ಪಾಕ್ ತಂಡದೊಂದಿಗೆ ಹ್ಯಾಡ್‌ಶೇಕ್ ಮಾಡದೇ ಇರುವ ಟೀಂ ಇಂಡಿಯಾ ನಿರ್ಧಾರಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಅದಕ್ಕೂ ಬಲವಾದ ಕಾರಣಗಳೂ ಉಂಟು.. ಉಗ್ರರ ನಾಡಿನಿಂದ ಬಂದ ತಂಡದಲ್ಲಿ ಕೆಲವರು ಉಗ್ರರಂತೆ ವರ್ತಿಸುವುದನ್ನು ರಾಜ್‌ದೀಪ್ ಸರ್ದೇಸಾಯಿ ಅವರು ಮರೆತಂತಿದೆ.
ಪಾಕಿಸ್ತಾನಿ ಆಟಗಾರರಲ್ಲಿ ಒಬ್ಬನಾದ ಫಹೀಮ್ ಅಶ್ರಫ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಭಾರತೀಯ ಮಹಿಳೆಯರನ್ನು ಹೀಯಾಳಿಸುವ ರೀತಿಯ ಪೋಸ್ಟ್ ಮಾಡಿದ್ದಾನೆ. “ಆಪರೇಷನ್ ಸಿಂಧೂರ್” ನಂತರ ಪಾಕಿಸ್ತಾನಿ ಸೈನಿಕರು ಭಾರತೀಯ ಮಹಿಳೆಯರ ಸಿಂಧೂರನ್ನು ಹಾಕುತ್ತಿರುವಂತೆ ಚಿತ್ರವೊಂದನ್ನು ಹಂಚಿದ್ದನು. ಇಂತಹ ಆಟಗಾರ ಪ್ರತಿನಿಧಿಸುವ ಟೀಂ ಜೊತೆಗೆ ಹ್ಯಾಂಡ್‌ಶೇಕ್ ಮಾಡಲು ಯಾವ ಭಾರತೀಯನೂ ಒಪ್ಪಲಾರ... ಹೀಗಿರುವಾಗ ಉಗ್ರ ಮನಸ್ಥಿತಿಯ, ಭಾರತಾಂಭೆಗೆ ಅವಮಾನಿಸುವ ತುಚ್ಛ ಜನರ ಸ್ಪರ್ಶದಿಂದ ದೂರ ಇರುವ ಟೀಂ ಇಂಡಿಯಾ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದು ನೆಟ್ಟಿಗರು, ಭಾರತೀಯರು ರಾಜ್‌ದೀಪ್ ಸರ್ದೇಸಾಯಿ ಅವರನ್ನು ಕುಟುಕಿದ್ದಾರೆ. ನೀವು ಕೂಡ ಕಮೆಂಟ್ ಮೂಲಕ ನಿಮ್ಮ ಮುಕ್ತ ಅಭಿಪ್ರಾಯವನ್ನು ತಿಳಿಸುವುದನ್ನು ಮರೆಯದಿರಿ.....
PublicNext
30/09/2025 08:25 pm