ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

CWG 2026: ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದ ವೈಟ್‌ಲಿಫ್ಟರ್ ಲವ್‌ಪ್ರೀತ್ ಸಿಂಗ್ - ಕೇವಲ 1 ಕೆಜಿಯಿಂದ ಕೈತಪ್ಪಿದ ಚಿನ್ನ

ಗ್ಲ್ಯಾಸ್ಗೋ: ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಭಾರತೀಯ ವೇಟ್‌ಲಿಫ್ಟರ್‌ಗಳು ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದು, ಪುರುಷರ ಪ್ಲಸ್ 110 ಕೆಜಿ ವಿಭಾಗದಲ್ಲಿ ಭಾರತದ ತಾರೆ ಲವ್‌ಪ್ರೀತ್ ಸಿಂಗ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಒಟ್ಟು 388 ಕೆಜಿ ಭಾರ ಎತ್ತುವ ಮೂಲಕ ಲವ್‌ಪ್ರೀತ್ ಈ ಹೆಮ್ಮೆಯ ಸಾಧನೆ ಮಾಡಿದ್ದಾರೆ.

28 ವರ್ಷದ ಲವ್‌ಪ್ರೀತ್ ಸಿಂಗ್ 'ಸ್ನ್ಯಾಚ್' ವಿಭಾಗದಲ್ಲಿ 176 ಕೆಜಿ ಭಾರ ಎತ್ತುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನೂತನ ದಾಖಲೆಯನ್ನು ಬರೆದರು. ತದನಂತರ 'ಕ್ಲೀನ್ ಮತ್ತು ಜರ್ಕ್' ವಿಭಾಗದಲ್ಲಿ 212 ಕೆಜಿ ಭಾರ ಎತ್ತಿ ಒಟ್ಟು 388 ಕೆಜಿ ಸಾಧನೆಯೊಂದಿಗೆ ಭಾರತಕ್ಕೆ ಹಿರಿಮೆ ತಂದಿತ್ತರು. ಆದರೆ ನ್ಯೂಜಿಲೆಂಡ್‌ನ ಡೇವಿಡ್ ಲಿಟಿ ಒಟ್ಟು 389 ಕೆಜಿ ಎತ್ತುವ ಮೂಲಕ ಕೇವಲ 1 ಕೆಜಿ ಅಂತರದಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡ ಕಾರಣ, ಲವ್‌ಪ್ರೀತ್ ಸಿಂಗ್‌ಗೆ ಚಿನ್ನದ ಪದಕ ಕೂದಲೆಳೆಯ ಅಂತರದಲ್ಲಿ ಕೈತಪ್ಪಿ ಬೆಳ್ಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಈ ಪದಕದೊಂದಿಗೆ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಲಭಿಸಿದ 8ನೇ ಪದಕ ಇದಾಗಿದೆ. ತಮ್ಮ ಈ ಸಾಧನೆಯ ಕುರಿತು ಮಾತನಾಡಿದ ಲವ್‌ಪ್ರೀತ್, ಚಿನ್ನದ ಪದಕ ತಪ್ಪಿದ್ದಕ್ಕೆ ಕೊಂಚ ಬೇಸರವಾಗಿದ್ದರೂ, ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Edited By : Vijay Kumar
PublicNext

PublicNext

31/07/2026 09:02 am

Cinque Terre

15.61 K

Cinque Terre

1

ಸಂಬಂಧಿತ ಸುದ್ದಿ